ಅಂಕೋಲಾ ನಗರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕದ ವತಿಯಿಂದ ನಿವೃತ್ತಿ ಹೊಂದಿದ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಂಕೋಲಾ: ವಿಶ್ರಾಂತ ಜೀವನವನ್ನು ಒತ್ತಡರಹಿತವಾಗಿ ಶಿಕ್ಷಕರು ಕಳೆಯಬೇಕು. ಹಲವು ದಶಕಗಳ ಕಾಲ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕನ್ನು ನೀಡಿ ಸಾರ್ಥಕ ಸೇವೆಯನ್ನು ಇಲಾಖೆಯಲ್ಲಿ ಸಲ್ಲಿಸಿದ್ದೀರಿ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲ್ಲೂಕು ಘಟಕ ವತಿಯಿಂದ ಅತ್ಯಂತ ಗೌರವದಿಂದ ನಿಮ್ಮನ್ನು ಸನ್ಮಾನಿಸಿ ಬೀಳ್ಕೊಡಲು ಸಂತಸವಾಗುತ್ತಿದೆ ಎಂದು ಉತ್ತರ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಲತಾ ನಾಯಕ ಹೇಳಿದರು.
ಅಂಕೋಲಾ ನಗರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲ್ಲೂಕು ಘಟಕದ ವತಿಯಿಂದ ನಂಬರ್ 1 ಶಾಲೆಯಲ್ಲಿ ಹಮ್ಮಿಕೊಳ್ಳಲಾದ ವಿಶ್ರಾಂತ ಶಿಕ್ಷಕರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮಿ ಪಾಟೀಲ್, ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಪೂರಕವಾದ ಶಿಕ್ಷಣ ನೀಡಿ ವಯೋನಿವೃತ್ತಿ ಹೊಂದಿರುವ ತಾವುಗಳು ಸುಖಕರ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂದರು.
ಕುಮಟಾ ಡಯಟ್‌ನ ನಿವೃತ್ತ ಪ್ರಾಚಾರ್ಯ ಎನ್. ಜಿ. ನಾಯಕ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಜಗದೀಶ ನಾಯಕ ಹೊಸ್ಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತಿ ಹೊಂದಿದ ಶಿಕ್ಷಕರಾದ ಬಾಲಚಂದ್ರ ನಾಯಕ, ಸುರೇಶ ಆಗೇರ್, ಪಾರ್ವತಿ ನಾಯಕ, ಗೀತಾ ನಾಯಕ, ಲಕ್ಷ್ಮೀ ನಾಯಕ, ಜಯಲಕ್ಷ್ಮಿ ನಾಯಕ, ಭವಾನಿ ನಾಯಕ, ಸಂಜೀವ ನಾಯಕ, ಚಂದ್ರಕಾಂತ ಟಿ. ಗೌಡ ಅವರುಗಳನ್ನು ಸನ್ಮಾನಿಸಿ ಬಿಳ್ಕೊಡಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ರಾಜು ನಾಯಕ, ಉಪಾಧ್ಯಕ್ಷ ಮಂಜುನಾಥ ನಾಯಕ, ಭಾರತಿ ನಾಯಕ, ತುಕಾರಾಮ ಬಂಟ, ದಿವಾಕರ ದೇವನ ಮನೆ, ಆನಂದು ನಾಯಕ, ವಿನಾಯಕ ನಾಯಕ, ಶೋಭಾ ನಾಯಕ, ವೆಂಕಮ್ಮ ನಾಯಕ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.