ಯಲ್ಲಾಪುರ: ತಾಲ್ಲೂಕಿನ ನಂದೊಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾಗೋಡು ಜಲಪಾತಕ್ಕೆ ಹೋಗುವ ರಸ್ತೆ ಶನಿವಾರ ಮೊಟ್ಟೆಗದ್ದೆ ಕ್ರಾಸ್ ಸಮೀಪ ಕುಸಿದಿದೆ.
ರಸ್ತೆಯ ಒಂದು ಬದಿ ಸುಮಾರು 10 ಅಡಿಗಳಷ್ಟು ಕುಸಿದಿದ್ದು ಯಾವುದೇ ವಾಹನ ಸಂಚರಿಸುವಂತಿಲ್ಲ. ಕಾರಣ ಮಾಗೋಡು ಜಲಪಾತಕ್ಕೆ ವಾಹನ ಸಂಚಾರ ನಿಷೇಧಿಸಲಾಗಿದೆ.
‘ಸಂಚಾರ ನಿಶೇಧದ ಬಗ್ಗೆ ರಸ್ತೆಯಲ್ಲಿ ಸೂಚನಾ ಫಲಕ ಅಡವಡಿಸಲಾಗಿದೆ. ತಾತ್ಕಾಲಿಕವಾಗಿ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ’ ಎಂದು ಪಿಡಿಒ ರಾಜೇಶ ಶೇಟ್ ತಿಳಿಸಿದ್ದಾರೆ.
ಪಟ್ಟಣದ ಜೋಡುಕೆರೆ ದಡದಲ್ಲಿರುವ ಮಾರುತಿ ಮಂದಿರಕ್ಕೆ ಶನಿವಾರ ಕೆರೆಯ ನೀರು ನುಗ್ಗಿದೆ. ಪ್ರತಿ ಶನಿವಾರ ಇಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದು ನೀರಿನ ನಡುವೆಯೇ ನಡೆದು ಭಕ್ತರು ಪೂಜೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.