ADVERTISEMENT

ಮರ್ಲಮನೆ:ರಸ್ತೆ ಪಕ್ಕ ಭೂಕುಸಿತ: ಸ್ಥಳೀಯರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 3:16 IST
Last Updated 23 ಅಕ್ಟೋಬರ್ 2020, 3:16 IST
ಮೂರುದಿನಗಳ ಹಿಂದೆ ಸುರಿದ ಮಳೆಗೆ ಮರ್ಲಮನೆ ಸಮೀಪ ಶಿರಸಿ–ಗೋಳಿಮಕ್ಕಿ ರಸ್ತೆಯ ಅಂಚು ಕುಸಿದಿರುವುದು
ಮೂರುದಿನಗಳ ಹಿಂದೆ ಸುರಿದ ಮಳೆಗೆ ಮರ್ಲಮನೆ ಸಮೀಪ ಶಿರಸಿ–ಗೋಳಿಮಕ್ಕಿ ರಸ್ತೆಯ ಅಂಚು ಕುಸಿದಿರುವುದು   

ಶಿರಸಿ: ತಾಲ್ಲೂಕಿನ ಮರ್ಲಮನೆ ಬಳಿ ಶಿರಸಿ–ಗೋಳಿಮಕ್ಕಿ ರಸ್ತೆಯ ಅಂಚಿನಲ್ಲಿ ಭೂಕುಸಿತವಾಗಿದ್ದು, ರಸ್ತೆ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ.

ಪಕ್ಕದಲ್ಲಿರುವ ಬೆಟ್ಟ ಪ್ರದೇಶದಿಂದ ಮಳೆನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಮಳೆನೀರು ಹರಿದು ಹೋಗಲು ಸಮೀಪದಲ್ಲಿ ಅಳವಡಿಸಿದ್ದ ಪೈಪ್‍ಲೈನ್ ಕೂಡ ಕುಸಿದಿದೆ. ಇದರಿಂದ ಈ ಸಮಸ್ಯೆ ಎದುರಾಗಿದೆ.

‘ವಾರದ ಹಿಂದೆ ಅಲ್ಪ ಪ್ರಮಾಣದಲ್ಲಿ ಕುಸಿತವಾಗಿತ್ತು. ಮೂರು ದಿನಗಳ ಹಿಂದೆ ಸುರಿದ ಮಳೆಯಿಂದ ಮತ್ತಷ್ಟು ಹೆಚ್ಚಿನ ಪ್ರಮಾಣದ ಭೂಕುಸಿತವಾಯಿತು’ ಎಂದು ಸ್ಥಳೀಯರಾದ ಕೃಷ್ಣಮೂರ್ತಿ ಹೆಗಡೆ ತಿಳಿಸಿದರು. ‘ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಅಲ್ಲಿ ಅಲ್ಪಪ್ರಮಾಣದ ಭೂಕುಸಿತ ಇತ್ತು. ಈಗ ಸಮೀಪದ ಮೋರಿಕಟ್ಟೆ ಕುಸಿದಿದೆ. ಸರಿಪಡಿಸಲು ಕ್ರಮವಹಿಸಲಾಗುತ್ತದೆ. ಸಂಚಾರ ಕಡಿತಗೊಳ್ಳುವ ಆತಂಕವಿಲ್ಲ’ ಎಂದು ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ಹನುಮಂತ ನಾಯ್ಕ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.