ADVERTISEMENT

ರೋಲರ್ ಹಾಕಿ: ಕೀರ್ತಿಗೆ ಅದ್ಧೂರಿ ಸ್ವಾಗತ

ಬಾರ್ಸಿಲೋನಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಐದನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 14:05 IST
Last Updated 19 ಜುಲೈ 2019, 14:05 IST
ವಿಶ್ವ ರೋಲರ್ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಮಲ್ಲಾಪುರ ಟೌನ್‌ಶಿಪ್‌ಗೆ ಶುಕ್ರವಾರ ವಾಪಸಾದ ಕೀರ್ತಿ ಹುಕ್ಕೇರಿಯನ್ನು ಸ್ಥಳೀಯರು ಅದ್ಧೂರಿಯಾಗಿ ಸ್ವಾಗತಿಸಿದರು.
ವಿಶ್ವ ರೋಲರ್ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಮಲ್ಲಾಪುರ ಟೌನ್‌ಶಿಪ್‌ಗೆ ಶುಕ್ರವಾರ ವಾಪಸಾದ ಕೀರ್ತಿ ಹುಕ್ಕೇರಿಯನ್ನು ಸ್ಥಳೀಯರು ಅದ್ಧೂರಿಯಾಗಿ ಸ್ವಾಗತಿಸಿದರು.   

ಕಾರವಾರ:‘ರೋಲರ್‌ ಹಾಕಿ ವಿಶ್ವ ಚಾಂಪಿಯನ್‌ಶಿಪ್‌’ನಲ್ಲಿ ಭಾರತದ ಮಹಿಳಾ ತಂಡವನ್ನು ಪ್ರತಿನಿಧಿಸಿದ್ದವಿದ್ಯಾರ್ಥಿನಿ ಕೀರ್ತಿ ಯಲ್ಲಪ್ಪ ಹುಕ್ಕೇರಿಯನ್ನು ಮಲ್ಲಾಪುರದ ಕೈಗಾ ಟೌನ್‌ಶಿಪ್‌ನಲ್ಲಿ ಶುಕ್ರವಾರ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಕೀರ್ತಿ, ಕೈಗಾ ಅಣುವಿದ್ಯುತ್ ಕೇಂದ್ರೀಯ ವಿದ್ಯಾಲಯದ 10ನೇ ತರಗತಿಯ ವಿದ್ಯಾರ್ಥಿನಿ.ಸ್ಪೇನ್‌ ದೇಶದ ಬಾರ್ಸಿಲೋನಾದಲ್ಲಿ ಜುಲೈ 4ರಿಂದ ಜುಲೈ 14ರವರೆಗೆ ಆಯೋಜನೆಯಾದ ಚಾಂಪಿಯನ್‌ಶಿಪ್‌ನಲ್ಲಿಸ್ಪರ್ಧಿಸಿದ್ದರಾಷ್ಟ್ರೀಯ ತಂಡದಲ್ಲಿ ಅವಳು ಸ್ಥಾನ ಗಿಟ್ಟಿಸಿಕೊಂಡಿದ್ದಳು. ಟೂರ್ನಿಯಲ್ಲಿ ತಂಡಕ್ಕೆ ಒಟ್ಟು ಮೂರು ಗೋಲ್‌ಗಳನ್ನು ಗಳಿಸಿದ್ದಳು.ಒಟ್ಟು 81 ದೇಶಗಳು ಭಾಗವಹಿಸಿದ್ದ ಈಟೂರ್ನಿಯಲ್ಲಿ ಭಾರತ ಐದನೇ ಸ್ಥಾನ ಪಡೆದುಕೊಂಡು ವಿಶ್ವದ ಗಮನ ಸೆಳೆದಿತ್ತು.

ಮೇ 1ರಿಂದ 5ರವರೆಗೆ ಗುಜರಾತ್ ರಾಜ್ಯದ ನಂದುರ್‌ಬಾರ್‌ನಲ್ಲಿ ನಡೆದ ರಾಷ್ಟ್ರೀಯ ರೋಲರ್ ಹಾಕಿ ಆಯ್ಕೆ ಶಿಬಿರದಲ್ಲಿ ಪಾಲ್ಗೊಂಡಿದ್ದಳು. ಅಲ್ಲಿ ಉತ್ತಮ ಪ್ರದರ್ಶನ ತೋರಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಳು.

ADVERTISEMENT

ಕೀರ್ತಿಯನ್ನು ಸ್ವಾಗತಿಸಿದ ಪಾಲಕರು ಹಾಗೂ ಗೆಳೆಯರು ಹಾರ ಮತ್ತು ಪೇಟ ತೊಡಿಸಿ, ಹೂಗುಚ್ಛ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿಕೈಗಾದ ರೋಲರ್ ಸ್ಕೇಟಿಂಗ್‌ ಕ್ಲಬ್‌ನತರಬೇತುದಾರ ದಿಲೀಪ್ ಹಣಬರ್, ಕೈಗಾ ನೌಕರರ ಮನೋರಂಜನಾ ಕ್ಲಬ್‌ನ ಕಾರ್ಯದರ್ಶಿ ರಾಕೇಶ್ ವಾಸ್ನಿಕ್, ಮಂಜುನಾಥ ದೇಸಾಯಿ,ಮಂಜಪ್ಪ, ಹನುಮಂತರಾಯ, ಟೌನ್‌ಶಿಪ್ ನಿವಾಸಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.