ADVERTISEMENT

ರಬ್ಬರಿನ ರಾಫ್ಟರ್ ಬೋಟ್ ಪತ್ತೆ

​ಪ್ರಜಾವಾಣಿ ವಾರ್ತೆ
Published 29 ಮೇ 2025, 14:55 IST
Last Updated 29 ಮೇ 2025, 14:55 IST

ಕುಮಟಾ: ತಾಲ್ಲೂಕಿನ ಗುಡೆಅಂಗಡಿ ಸಮುದ್ರ ತೀರದಲ್ಲಿ ಬುಧವಾರ ರಬ್ಬರಿನ ರಾಫ್ಟರ್ ಬೋಟ್ ಪತ್ತೆಯಾಗಿದೆ ಎಂದು ಸ್ಥಳೀಯ ಕರಾವಳಿ ಕಾವಲು ಪಡೆ ಸಿಪಿಐ ಇ.ಸಿ. ಸಂಪತ್ ತಿಳಿಸಿದ್ದಾರೆ.

‘ದೊಡ್ಡ ಹಡಗು ಸಮುದ್ರದಲ್ಲಿ ಮುಳುಗಿದಾಗ ಅದರಿಂದ ಪಾರಾಗಲು ಈ ಬೋಟ್ ಅನ್ನು ಬಳಸುತ್ತಾರೆ. ಒಂದು ಬಟನ್ ಅದುಮಿದಾಗ ರಬ್ಬರ್ ರಾಫ್ಟರ್‌ನಲ್ಲಿ ಗಾಳಿ ತುಂಬಿ ಅದು ಪುಟ್ಟ ಬೋಟ್ ಆಕಾರ ಪಡೆದುಕೊಳ್ಳುತ್ತದೆ. ಅದರಲ್ಲಿ ತೇಲಿ ದಡ ಸೇರಹುದಾಗಿದೆ’ ಎಂದರು.

‘ಇದು ಬಹುಶಃ ಈಚೆಗೆ ಕೇರಳದಲ್ಲಿ ಮುಳುಗಿದ ಹಡಗಿನ ರಾಫ್ಟರ್ ಆಗಿರುವ ಸಾಧ್ಯತೆ ಇದ್ದು, ದೃಢಪಡಿಸಿಕೊಳ್ಳಲಾಗುತ್ತಿದೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.