ADVERTISEMENT

ಸೇಂಟ್ ಅಂಥೋನಿ ಮಕ್ಕಳು ರಾಜ್ಯ ಮಟ್ಟಕ್ಕೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 13:11 IST
Last Updated 19 ಅಕ್ಟೋಬರ್ 2019, 13:11 IST
ರನ್ನರ್‌ಅಪ್ ಬಹುಮಾನ ಪಡೆದ ಶಿರಸಿ ಸೇಂಟ್ ಅಂಥೋನಿ ಶಾಲೆಯ ಮಕ್ಕಳು
ರನ್ನರ್‌ಅಪ್ ಬಹುಮಾನ ಪಡೆದ ಶಿರಸಿ ಸೇಂಟ್ ಅಂಥೋನಿ ಶಾಲೆಯ ಮಕ್ಕಳು   

ಶಿರಸಿ: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ರಾಯಭಾಗ ತಾಲ್ಲೂಕಿನಲ್ಲಿ ಗುರುವಾರ ನಡೆದ ವಿಭಾಗೀಯ ಮಟ್ಟದ ಥ್ರೋಬಾಲ್ ಪಂದ್ಯದಲ್ಲಿ ಇಲ್ಲಿನ ಸೇಂಟ್ ಅಂಥೋನಿ ಇಂಗ್ಲಿಷ್ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ರನ್ನರ್‌ಅಪ್ ಬಹುಮಾನ ಪಡೆದು, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪಂದ್ಯದಲ್ಲಿ ಹಾವೇರಿ ಮತ್ತು ಬಾಗಲಕೋಟೆ ಜಿಲ್ಲೆಯ ತಂಡಗಳನ್ನು ಸೋಲಿಸಿದ ಶಿರಸಿಯ ತಂಡ ಅಂತಿಮ ಸುತ್ತು ಪ್ರವೇಶಿಸಿತ್ತು. ಅಂತಿಮ ಪಂದ್ಯದಲ್ಲಿ ಚಿಕ್ಕೋಡಿ ತಂಡದ ಎದುರು ಸೋಲೊಪ್ಪಿಕೊಂಡಿತು. ತಂಡದಲ್ಲಿ ಅಭಿರೂಪ ನಾಯ್ಕ, ವಶಿಷ್ಠ ಹೆಗಡೆ, ಪ್ರೇಮ ವೈದ್ಯ, ಕಾಮಿಲ್ ಭರತನಹಳ್ಳಿ, ಅಬ್ದುಲ್ ಖಾದರ್, ವಿಶಾಲ ಮಶಾಲ್ಡಿ, ಕಾರ್ತಿಕ ಶೆಟ್ಟಿ, ರಿಷಿ ಮುಳೆ, ಅಖಿಲ ಮುರ್ಡೇಶ್ವರ, ಆದಿತ್ಯ ವಾರೇಕರ, ಶ್ರೀವಾಸ್ತ ಶೆಟ್ಟಿ, ಜುಬಿನ್ ಸೈಯದ್ ಇದ್ದರು.

ಪಂದ್ಯಾವಳಿಯಲ್ಲಿ ಹಾವೇರಿ ಹಾಗೂ ಬಾಗಲಕೋಟ ಜಿಲ್ಲೆಯ ತಂಡಗಳನ್ನು ಸೋಲಿಸಿದ ಶಿರಸಿಯ ಸೆಂಟ್ ಅಂಥೋನಿ ಇಂಗ್ಲೀಷ್ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ತಂಡ ಅಂತಿಮ ಸುತ್ತಿಗೆ ಪ್ರವೇಶಿಸಿತ್ತು. ಅಂತಿಮ ಸುತ್ತಿನ ಪಂದ್ಯದಲ್ಲಿ ಚಿಕ್ಕೋಡಿ ತಂಡದ ಎದುರು ಸೋಲುವ ಮೂಲಕ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು. ಥ್ರೋ ಬಾಲ್ ತಂಡದಲ್ಲಿ ಅಭಿರೂಪ ನಾಯ್ಕ, ವಶಿಷ್ಠ ಹೆಗಡೆ, ಪ್ರೇಮ ವೈದ್ಯ, ಕಾಮಿಲ್ ಭರತನಹಳ್ಳಿ, ಅಬ್ದುಲ್ ಖಾದರ್, ವಿಶಾಲ ಮಶಾಲ್ದಿ, ಕಾರ್ತಿಕ ಶೆಟ್ಟಿ, ರಿಷಿ ಮೂಳೆ, ಅಖಿಲ ಮುರ್ಡೆಶ್ವರ, ಆದಿತ್ಯ ವಾರೇಕರ, ಶ್ರೀವಾಸ್ತ ಶೆಟ್ಟಿ, ಜುಬಿನ್ ಸೈಯದ್ ಇದ್ದರು. ಮುಖ್ಯ ಶಿಕ್ಷಕಿ ಲವಿತಾ ನರೋನ್ಹಾ, ದೈಹಿಕ ಶಿಕ್ಷಣ ಶಿಕ್ಷಕ ಗಫಾರ್ ಮಕ್ಕಳನ್ನು ಅಭಿನಂದಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.