ಹೊನ್ನಾವರ: ’ಅಜ್ಞಾನವೆಂಬ ನಿದ್ದೆಯಿಂದ ಜನರನ್ನು ಎಬ್ಬಿಸಿ ಜ್ಞಾನ ಮಾರ್ಗದಲ್ಲಿ ಸಾಗುವಂತೆ ಮಾಡಿದ ಆದಿ ಶಂಕರಾಚಾರ್ಯರು ಮನಸ್ಸಿನಲ್ಲಿ ಒಳ್ಳೆತನ ತುಂಬಿದ ವ್ಯಕ್ತಿಯಿಂದ ಮಾತ್ರ ಜಗತ್ತಿನ ಒಳಿತು ಸಾಧ್ಯ ಎಂಬುದನ್ನು ವಾಸ್ತವದಲ್ಲಿ ನಿರೂಪಿಸಿ ತೋರಿಸಿದರು’ ಎಂದು ಕರ್ಕಿ ದೈವಜ್ಞ ಮಠದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಹೇಳಿದರು.
ಪಟ್ಟಣದ ಶಾರದಾಂಬಾ ದೇವಸ್ಥಾನದಲ್ಲಿ ನಡೆದ ಶಂಕರ ಭಗವತ್ಪಾದರ ಜಯಂತ್ಯುತ್ಸವದಲ್ಲಿ ಆಶೀರ್ವಚನ ನೀಡಿದರು.
ಹಳದೀಪುರ ಶಾಂತಾಶ್ರಮ ಮಠದ ವಾಮನಾಶ್ರಮ ಸ್ವಾಮೀಜಿ ಆಶೀರ್ವಚನ ನೀಡಿ, ‘ಶಂಕರಾಚಾರ್ಯರು ಯಾವುದೇ ಜಾತಿ ಅಥವಾ ಸಮುದಾಯಕ್ಕೆ ಸೀಮಿತರಾಗಿಲ್ಲ.ಅವರ ಚಿಂತನೆ ಜಗತ್ತಿಗೇ ಬೆಳಕು ನೀಡಬಲ್ಲದು’ ಎಂದರು.
ಪತಂಜಲಿ ವೀಣಾಕರ ಶಂಕರಾಚಾರ್ಯರ ಜೀವನ ಹಾಗೂ ಸಾಧನೆಯ ಕುರಿತು ಉಪನ್ಯಾಸ ನೀಡಿದರು. ಸುಬ್ರಾಯ ಮೇಸ್ತ, ,ದಿನೇಶ ಕಾಮತ, ,ಉದ್ಯಮಿ ಯೋಗೇಶ ಮೇಸ್ತ ಇದ್ದರು.
ಚಿಣ್ಣರು ಶಂಕರಾಚಾರ್ಯರ ವೇಷ ತೊಟ್ಟು ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.