ಬಂಧನ
(ಪ್ರಾತಿನಿಧಿಕ ಚಿತ್ರ)
ಶಿರಸಿ (ಉತ್ತರ ಕನ್ನಡ): ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದು, ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ನರೇಬೈಲಿನ ಮಹ್ಮದ್ ಉಬೇದ ಮಹ್ಮದ್ ಸಲೀಂ ಜವಳಿ, ಇಸಳೂರಿನ ಸುನೀಲ ಮಹಾದೇವಪ್ಪ ನಡಗಿ, ಕಸ್ತೂರ ಬಾ ನಗರದ ಅಲ್ತಾಫ್ ರೆಹಮತ್ ಉಲ್ಲಾ ಬಂಧಿತರು. ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಮಹ್ಮದ್ ಉಬೇದ ಮಹ್ಮದ್ ಸಲೀಂ ಜವಳಿ, ಪಡಿತರ ಚೀಟಿದಾರರಿಂದ ಕಡಿಮೆ ಬೆಲೆಗೆ ಖರೀದಿಸಿದ್ದ ಒಟ್ಟು 40 ಕ್ವಿಂಟಲ್ ಅಕ್ಕಿಯನ್ನು ತಮ್ಮ ಗಿರಣಿಯಲ್ಲಿ ಇಟ್ಟಿದ್ದರು. ಅದನ್ನು ಸುನೀಲ ಮಹಾದೇವಪ್ಪ ನಡಗಿ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಲು ಹುಬ್ಬಳ್ಳಿಯತ್ತ ಅಲ್ತಾಫ್ ರೆಹಮತ್ ಉಲ್ಲಾ ಜತೆಗೂಡಿ ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಂದಾಜು ₹1.36 ಲಕ್ಷ ಮೌಲ್ಯದ 40 ಕ್ವಿಂಟಲ್ ಪಡಿತರ ಅಕ್ಕಿ, ಸಾಗಣೆಗೆ ಬಳಸುತ್ತಿದ್ದ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.