ADVERTISEMENT

ಭಟ್ಕಳ ತಾಲೂಕಿನಾದ್ಯಂತ ಶಿವರಾತ್ರಿ ಉತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2025, 12:56 IST
Last Updated 26 ಫೆಬ್ರುವರಿ 2025, 12:56 IST
ಮುರುಡೇಶ್ವರದಲ್ಲಿ ಶಿವರಾತ್ರಿ ಅಂಗವಾಗಿ ಮುರುಡೇಶ್ವರ ದೇವರನ್ನು ಅಲಂಕಾರಗೊಳಿಸಿ ಪೂಜಿಸಲಾಯಿತು
ಮುರುಡೇಶ್ವರದಲ್ಲಿ ಶಿವರಾತ್ರಿ ಅಂಗವಾಗಿ ಮುರುಡೇಶ್ವರ ದೇವರನ್ನು ಅಲಂಕಾರಗೊಳಿಸಿ ಪೂಜಿಸಲಾಯಿತು   

ಭಟ್ಕಳ: ತಾಲ್ಲೂಕಿನಾದ್ಯಂತಹ ಶಿವನ ದೇವಾಲಯಗಳಲ್ಲಿ ಶ್ರದ್ಧಾ– ಭಕ್ತಿಯಿಂದ ಶಿವರಾತ್ರಿ ಆಚರಿಸಲಾಯಿತು.

ಜಗತ್ ಪ್ರಸಿದ್ದ ಮುರುಡೇಶ್ವರ ದೇವಸ್ಥಾನ ಸೇರಿದಂತೆ ಪಟ್ಟಣದ ವಿವಿರಸ್ತೆಯಲ್ಲಿರುವ ಚೋಳೇಶ್ವರ ದೇವಸ್ಥಾನ, ಸೋನಾರಕೇರಿಯಲ್ಲಿರು ವಿರೂಪಾಕ್ಷ ದೇವಸ್ಥಾನ, ನೆಹರು ರಸ್ತೆಯಲ್ಲಿರುವ ಶಾಂತೇರಿ ಕಾಮಾಕ್ಷಿ ದೇವಸ್ಥಾನ, ಬೈಲಕೇರಿಯಲ್ಲಿರುವ ಪಶುಪತಿ ದೇವಸ್ಥಾನ, ಬಂದರಿನಲ್ಲಿರುವ ಕುಟುಮೇಶ್ವರ ದೇವಸ್ಥಾನಗಳಿಗೆ ಮುಂಜಾನೆಯಿಂದಲೇ ಭಕ್ತರ ದಂಡು ಹರಿದು ಬಂದಿತು.

ಶಿವರಾತ್ರಿ ಅಂಗವಾಗಿ ಭಕ್ತರು ಶಿವನಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಭಸ್ಮಾಭಿಷೇಕ ಮಾಡಿಸಿ ಪುನೀತರಾದರು. ತಾಲ್ಲೂಕಿನಲ್ಲಿ ಎಲ್ಲಾ ಶಿವನ ದೇವಾಲಯಗಳಿಗೆ ಮುಜರಾಯಿ ಇಲಾಖೆಯಿಂದ ಅಭಿಷೇಕಕ್ಕಾಗಿ ಗಂಗಾಜಲ ವಿತರಿಸಲಾಯಿತು. ಶಿವರಾತ್ರಿ ಅಂಗವಾಗಿ ಶಿವನ ದೇಗುಲದಲ್ಲಿ ಭಜನೆ, ಸಂಕೀರ್ತನೆ ಹಾಗೂ ಜಾಗರಣೆ ಜೋರಾಗಿಯೇ ನಡೆದಿತ್ತು. ಮುರುಡೇಶ್ವರದಲ್ಲಿ ಶಿವರಾತ್ರಿ ಅಂಗವಾಗಿ ಉತ್ಸವ ಆಚರಿಸಲಾಯಿತು. ಸಂಜೆ ದೇವರ ಉತ್ಸವ ಮೂರ್ತಿಯನ್ನು ಪಲ್ಲಕಿಯಲ್ಲಿ ಕೂರಿಸಿ ಮೆರವಣಿಗೆ ನಡೆಲಾಯಿತು. ರಾತ್ರಿ ಸ್ವರ್ಣಾಲಂಕೃತ ರಥೋತ್ಸವ ನಡೆಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.