ಅಂಕೋಲಾ: ಇಲ್ಲಿನ ಪುರಸಭೆಯ ಸದಸ್ಯರು ನೃತ್ಯ ಮತ್ತು ಅಭಿನಯದ ಮೂಲಕ ನಿರ್ಮಿಸಿದ ಕಿರುಚಿತ್ರ ಪುರಸಭೆಯ ಪೌರಕಾರ್ಮಿಕರಿಂದ ವಿಭಿನ್ನವಾಗಿ ಈಚೆಗೆ ಬಿಡುಗಡೆಯಾಯಿತು.
ಪರಿಸರ ಸಂರಕ್ಷಣೆ, ಸಾವಯವ ಕೃಷಿ, ಇನ್ನಿತರ ಅಂಶಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಿರುಚಿತ್ರವನ್ನು ಪೌರಕಾರ್ಮಿಕರಾದ ಹರಿಶ್ಚಂದ್ರ ನಾಯ್ಕ ಮತ್ತು ಮಂಗಲಾ ಶೆಡಗೇರಿ ಬಿಡುಗಡೆಗೊಳಿಸಿದರು.
ಪುರಸಭೆಯ ಅಧ್ಯಕ್ಷ ಸೂರಜ್ ನಾಯ್ಕ, ‘ಪ್ರತಿನಿತ್ಯ ಪೌರಕಾರ್ಮಿಕರು ಪಟ್ಟಣದ ಸ್ವಚ್ಛತೆಗೆ ಅವಿರತವಾಗಿ ಶ್ರಮಿಸುತ್ತಾರೆ. ಮಳೆ ಗಾಳಿ ಚಳಿ ಎನ್ನದೆ ನಮ್ಮೆಲ್ಲರ ಸ್ವಾಸ್ಥ್ಯ ಬದುಕನ್ನು ಕಾಪಾಡಲು ದುಡಿಯುತ್ತಾರೆ. ಅವರಿಗೆ ನೆರವಾಗುವ ಹಿನ್ನೆಲೆ ಈ ಜಾಗೃತಿ ಕಿರುಚಿತ್ರವನ್ನು ಚಿತ್ರಿಕರಿಸಲಾಗಿದೆ’ ಎಂದರು.
ಪುರಸಭೆಯ ಸದಸ್ಯರಾದ ತಾರಾ ನಾಯ್ಕ, ರೇಖಾ ಗಾಂವಕರ, ಜಯಾ ನಾಯ್ಕ, ಹೇಮಾ ಆಗೇರ, ಜಯಪ್ರಕಾಶ ನಾಯ್ಕ, ಮಂಗೇಶ ಆಗೇರ, ಶಬ್ಬೀರ ಶೇಕ್ ಪುರಸಭೆಯ ಸಿಬ್ಬಂದಿಗಳಾದ ಪರಶುರಾಮ ಬಳ್ಳಾರಿ, ದರ್ಶನ್ ನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.