ಸಿದ್ದಾಪುರ: ಅಂಧಮಕ್ಕಳು ತಮಗೆ ಹೊರಜಗತ್ತು ಕಾಣುತ್ತಿಲ್ಲ ಎಂದು ಬೇಸರಪಡುವ ಅಗತ್ಯವಿಲ್ಲ. ಅವರ ಒಳಗಣ್ಣು ಅತ್ಯಂತ ಶಕ್ತಿಶಾಲಿಯಾಗಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸ್ಥಳೀಯ ಹೋಲಿ ರೋಜಾರಿಯೋ ಚರ್ಚನ ಧರ್ಮಗುರು ಫಾ. ಸಿರಿಲ್ ಫರ್ನಾಂಡಿಸ್ ಹೇಳಿದರು.
ಕಾರವಾರದ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋಆಪರೇಟಿವ್ ಸೊಸೈಟಿಯ ಸಿದ್ದಾಪುರ ಶಾಖೆಯ ವತಿಯಿಂದ ಪಟ್ಟಣದ ಹಾಳತಕಟ್ಟಾದ ಆಶಾಕಿರಣ ಟ್ರಸ್ಟನ ಶ್ರೀ ಮುರುಘರಾಜೇಂದ್ರ ಅಂಧರಶಾಲೆಯ ಅಂಧಮಕ್ಕಳಿಗೆ ಅಗತ್ಯವಸ್ತುಗಳ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸೋಮವಾರ ಅವರು ಮಾತನಾಡಿದರು.
ವಾಣಿಜ್ಯಕ್ಷೇತ್ರದಲ್ಲಿ ತೊಡಗಿಕೊಂಡ ಸಂಸ್ಥೆಗಳು ಸಮಾಜದ ಏಳ್ಗೆಗೆ ಕೈಜೋಡಿಸಿದಾಗ ಹೆಚ್ಚಿನ ಬದಲಾವಣೆ ಸಾಧ್ಯ. ಸೇಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋಆಪರೇಟಿವ್ ಸೊಸೈಟಿ ಸಮಾಜಮುಖಿಯಾದ ಇಂಥ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುವದು ಶಾಘ್ಲನೀಯ ಎಂದರು.
ಸಾಹಿತಿ ಗಂಗಾಧರ ಕೊಳಗಿ ಮಾತನಾಡಿದರು. ಮುಖ್ಯ ಅತಿಥಿ ಆಶಾಕಿರಣ ಟ್ರಸ್ಟನ ಉಪಾಧ್ಯಕ್ಷ ಸಿ.ಎಸ್.ಗೌಡರ್, ಬ್ಯಾಂಕಿನ ಶಿರಸಿ ವಿಭಾಗದ ಅಭಿವೃದ್ಧಿ ಅಧಿಕಾರಿ ವಿನೋದ ಮಡಿವಾಳ ಮಾತನಾಡಿದರು.
ವೇದಿಕೆಯಲ್ಲಿ ಆಶಾಕಿರಣ ಟ್ರಸ್ಟ ಪದಾಧಿಕಾರಿ ವಾಸುದೇವ ಶೇಟ್,ಸ್ಥಳೀಯ ಶಾಖೆಯ ವ್ಯವಸ್ಥಾಪಕ ಲೋಕೇಶ ನಾಯ್ಕ, ಅಧಿಕಾರಿಗಳಾದ ಚಿನ್ಮಯ ಹೆಗಡೆ, ರಾಘವೇಂದ್ರ ಭಂಡಾರಿ ಹಾಗೂ ಶಾಖಾ ಸಿಬ್ಬಂದಿಗಳಿದ್ದರು. ಯಶೋಧಾ ನಾಯ್ಕ ಸ್ವಾಗತಿಸಿದರು. ಪವಿತ್ರಾ ವಂದಿಸಿದರು. ಸೌಮ್ಯಾ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.