ADVERTISEMENT

ಹೈನುಗಾರರಿಗೆ ಪ್ರೋತ್ಸಾಹಧನದ ಮೊತ್ತ ನೀಡಿ: ಕೆಶಿನ್ಮನೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಜೂನ್ 2023, 13:11 IST
Last Updated 8 ಜೂನ್ 2023, 13:11 IST
ಸುರೇಶ್ಚಂದ್ರ ಹೆಗಡೆ
ಸುರೇಶ್ಚಂದ್ರ ಹೆಗಡೆ   

ಶಿರಸಿ: ‘ಹೈನುಗಾರರಿಗೆ ಪ್ರತಿ ಲೀಟರ್ ಹಾಲಿಗೆ ರಾಜ್ಯ ಸರ್ಕಾರ ನೀಡುವ ₹5 ಪ್ರೋತ್ಸಾಹ ಧನದ ಮೊತ್ತ ಏಳು ತಿಂಗಳಿಂದ ಬಂದಿಲ್ಲ. ತಕ್ಷಣ ಸರ್ಕಾರ ಈ ಮೊತ್ತವನ್ನು ನೀಡಬೇಕು’ ಎಂದು ಧಾರವಾಡ ಸಹಕಾರ ಹಾಲು ಒಕ್ಕೂಟದ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಒತ್ತಾಯಿಸಿದ್ದಾರೆ.

‘ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ 273 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಜಿಲ್ಲೆಯ ಎಲ್ಲ ಸಂಘಗಳಿಂದ ನಿತ್ಯ 30,698 ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದಕ್ಕೆ ನಿತ್ಯ ಪ್ರತಿ ಲೀಟರ್‌ಗೆ ₹5 ಪ್ರೋತ್ಸಾಹ ಧನ ಬರಬೇಕಿತ್ತು. 2022ರ ಅಕ್ಟೋಬರ್ ತಿಂಗಳಿಂದ 2023ರ ಏಪ್ರಿಲ್ ತನಕ ₹3.65 ಕೋಟಿ ರಾಜ್ಯ ಸರ್ಕಾರ ನೀಡುವುದು ಬಾಕಿಯಿದೆ. ಸರ್ಕಾರದ ವಿಳಂಬ ಧೋರಣೆಯಿಂದ ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ’ ಎಂದು ಅವರು ಗುರುವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಜಿಲ್ಲೆಯಲ್ಲಿ ಹೈನುಗಾರಿಕೆಯನ್ನು ನಡೆಸಿಕೊಂಡು ಹೋಗುವುದು ಬಹಳ ಕಷ್ಟಕರವಾಗಿದೆ. ಭತ್ತದ ಬೆಳೆಗಾರರು ಕಡಿಮೆ ಆದ ಕಾರಣ ಒಣ ಮೇವಿನ ಕೊರತೆ ಉಂಟಾಗಿದ್ದು, ಬೆಲೆಯಲ್ಲಿ ತೀರಾ ಹೆಚ್ಚಳವಾಗಿದೆ. ಹೈನುಗಾರರು ತೀರಾ ಸಂಕಷ್ಟದಲ್ಲಿದ್ದಾರೆ. ಪ್ರೋತ್ಸಾಹಧನ ಶೀಘ್ರದಲ್ಲಿ ಬಿಡುಗಡೆಯಾಗದಿದ್ದರೆ ಹಾಲು ಉತ್ಪಾದಕರು ಇನ್ನೂ ಹೆಚ್ಚಿನ ತೊಂದರೆಗೆ ಒಳಗಾಗಲಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.