ಶಿರಸಿ: ನಗರದ ಪ್ರಧಾನ ಅಂಚೆ ಕಚೇರಿ ಪಕ್ಕದಲ್ಲಿ ನಗರಸಭೆಯವರು ನಿರ್ಮಿಸಿರುವ ಸಾರ್ವಜನಿಕ ಶೌಚಾಲಯ ಅವ್ಯವಸ್ಥೆಯಿಂದ ಕೂಡಿದ್ದು, ಸಾರ್ವಜನಿಕರು ಹಾಗೂ ಸುತ್ತಮುತ್ತಲ ಅಂಗಡಿಕಾರರಿಗೆ ತೀವ್ರ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಸಮಸ್ಯೆ ಬಗೆಹರಿಸುವಂತೆ ಹೋಟೆಲ್ ಉದ್ಯಮಿ ಕರುಣೇಶ ಅಂಗಡಿ ಆಗ್ರಹಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ‘ಶೌಚಾಲಯಕ್ಕೆ ಒಂದು ಸಣ್ಣ ಸೆಪ್ಟಿಕ್ ಟ್ಯಾಂಕ್‍ಅನ್ನು ರಸ್ತೆ ಮಧ್ಯದಲ್ಲಿಯೇ ನಿರ್ಮಿಸಿದ್ದಾರೆ. ಶೌಚಾಲಯದ ನೀರು ಹರಿದು ಹೋಗಲು ಯಾವುದೇ ಪೈಪ್‍ಲೈನ್ ವ್ಯವಸ್ಥೆ ಇಲ್ಲ. ಶೌಚಾಲಯ ಸ್ವಚ್ಚಗೊಳಿಸಲು ಹಾಕಿದ ನೀರು ರಸ್ತೆಯ ಮೇಲೆಯೇ ಹರಿಯುತ್ತದೆ. ಅದೇ ನೀರನ್ನು ತುಳಿದು ಸಾರ್ವಜನಿಕರು ಓಡಾಡುವಂತಾಗಿದೆ’ ಎಂದು ದೂರಿದರು.
‘ಶೌಚಾಲಯವನ್ನು ಸರಿಯಾಗಿ ಸ್ವಚ್ಛಗೊಳಿಸದೇ ಯಾವಾಗಲೂ ದುರ್ವಾಸನೆ ಬರುತ್ತಿರುತ್ತದೆ. ಇದರಿಂದ ಸುತ್ತಮುತ್ತಲಿನ ಅಂಗಡಿಕಾರರಿಗೆ, ಅಂಚೆ ಕಚೇರಿಗೆ ಬರುವ ಸಾರ್ವಜನಿಕರಿಗೆ, ಹೋಟೆಲ್ ಉದ್ಯಮಿಗಳಿಗೆ ಮತ್ತು ಅಲ್ಲಿ ಓಡಾಡವು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಕಾರಣ ಶೌಚಾಲಯವನ್ನು ಸರಿಯಾದ ರೀತಿಯಲ್ಲಿ ಹೈಟೆಕ್ ಮಾದರಿ ಮಾಡುವವರೆಗೆ ಈ ಶೌಚಾಲಯವನ್ನು ಬಂದ್ ಮಾಡಲು ಮತ್ತು ರಸ್ತೆಯ ಮಧ್ಯ ಇರುವ ಸೆಪ್ಟಿಕ್ ಟ್ಯಾಂಕ್ ತೆರವುಗೊಳಿಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.