ADVERTISEMENT

ಶಿರಸಿ: ಶರತ ಆಚಾರಿ ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 3:11 IST
Last Updated 12 ಆಗಸ್ಟ್ 2025, 3:11 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಶಿರಸಿ: ಕೊಲೆ ಪ್ರಕರಣದ ಅಪರಾಧಿ ಭರತಸಿಂಗ್ ತ್ರಿಲೋಕ ಸಿಂಗ್ ಅಧಿಕಾರಿ ಈತನಿಗೆ ಜೀವಾವಧಿ ಶಿಕ್ಷೆ, ₹10 ಸಾವಿರ ದಂಡ ಮತ್ತು ಕೊಲೆಯಾದ ವ್ಯಕ್ತಿಯ ಕುಟುಂಬಕ್ಕೆ ₹1 ಲಕ್ಷ ಪರಿಹಾರ ನೀಡುವಂತೆ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಅವರು ಸೋಮವಾರ ತೀರ್ಪು ನೀಡಿದ್ದಾರೆ. 

ADVERTISEMENT

2016ರ ಆ.11ರಂದು ಶರತ ಗಣೇಶ ಆಚಾರಿ ಸಿದ್ದಾಪುರ ತಾಲ್ಲೂಕಿನ ಕಾನಸೂರನಿಂದ ಹಿರೆಕೈಗೆ ಬೈಕ್ ಮೇಲೆ ಸಾಗುತ್ತಿದ್ದ ಸಂದರ್ಭದಲ್ಲಿ ಆರೋಪಿಗಳು ತಡೆದು ಕೊಲೆ ಮಾಡಿ ಹಣ ದೋಚಿದ್ದರು. ಅಂದಿನ ಸಿದ್ದಾಪುರ ಸಿಪಿಐ ಜಯರಾಮ ಗೌಡಾ ಕೋರ್ಟ್‍ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಕೊಲೆ ಪ್ರಕರಣದ ಎರಡನೇ ಅಪರಾಧಿ ದಿಲರಾಜ್ ಈತನಿಗೆ ಈಗಾಗಲೇ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಪ್ರಸ್ತುತ ಮೊದಲ ಅಪರಾಧಿಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.