ಅಂಚೆ ಕಚೇರಿ
ಶಿರಸಿ: ಒಂದು ಸೂರು ನೂರು ಸೇವೆ ಎಂಬ ಧ್ಯೇಯ ವಾಖ್ಯದೊಂದಿಗೆ ತಾಲ್ಲೂಕಿನ ಹುಣಸೆಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಅಂಚೆ ಜನ ಸಂಪರ್ಕ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಈ ಎರಡು ದಿನದ ಅಭಿಯಾನದಲ್ಲಿ ವಿವಿಧ ಅಂಚೆ ಸೇವೆಗಳ ಮಾಹಿತಿ ಕಾರ್ಯಾಗಾರ ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ ₹10 ಲಕ್ಷಗಳ ಅಪಘಾತ ವಿಮೆ ಯೋಜನೆ, ಆಧಾರ್ ತಿದ್ದುಪಡಿ, ಆಧಾರ್ ನೋಂದಣಿ, ಅಂಚೆ ಖಾತೆ ಮತ್ತು ಅಂಚೆ ಜೀವ ವಿಮೆಗಳ ಲಾಭ ಪಡೆದುಕೊಳ್ಳಬಹುದಾಗಿದೆ. ಡೈರೆಕ್ಟ್ ಬೆನಿಫಿಟ್ ಟ್ರಾನ್ಸಫರ್ ಫಲಾನುಭವಿಗಳಿಗೆ ಐಪಿಪಿಬಿ ಮೊದಲಾದ ಆನ್-ಲೈನ್ ಖಾತೆಗಳನ್ನು ಸ್ಥಳದಲ್ಲಿಯೇ ತೆರೆಯುವ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಶಿರಸಿ ದಕ್ಷಿಣ ಉಪ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಎಂ.ಜಿ.ಕರಣ್ ಅವರು
ವಿವಿಧ ಅಂಚೆ ಸೇವೆಗಳ ಬಗ್ಗೆ ಮಾಹಿತಿ ನೀಡಿದರು. ಪಂಚಾಯಿತಿ ಉಪಾಧ್ಯಕ್ಷ ಗಣೀಶ ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಅಂಚೆ ಇಲಾಖೆಯ ಎಲ್ಲಾ ಯೋಜನೆಗಳು ಜನ ಸ್ನೇಹಿ ಯೋಜನೆಗಳಾಗಿವೆ. ಪ್ರತಿಯೊಬ್ಬ ಜನಸಾಮಾನ್ಯ ಕೂಡ ಇದರ ಸದುಪಯೋಗವನ್ನು ಪಡೆಯಬೇಕು’ ಎಂದು ತಿಳಿಸಿದರು.
ಪಿಡಿಒ ಕಲ್ಲಪ್ಪ ಮಳಗನವರ, ಪ್ರಮುಖರಾದ ಮಂಜುನಾಥ ಹೆಗಡೆ , ಪುರುಷೋತ್ತಮ ಅಂಬಿಗ, ರಜನಿ ಹೆಗಡೆ, ಮಣಿಕಂಠ ಭೋವಿವಡ್ಡರ, ಅರವಿಂದ ಗುಡಿಗಾರ, ನಾಗರಾಜ ತಳವಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.