ADVERTISEMENT

ರಾಜಕೀಯದಲ್ಲಿ ಮೀನುಗಾರರ ಪರ ನಾಯಕರಿಲ್ಲ: ಮಧ್ವರಾಜ್

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2023, 13:17 IST
Last Updated 7 ಸೆಪ್ಟೆಂಬರ್ 2023, 13:17 IST
ಶಿರಸಿಯಲ್ಲಿ ಆಯೋಜಿಸಿದ್ದ ಗಂಗಾಮತಸ್ಥರ ಸಭೆಯನ್ನು ಮಾಜಿ ಸಚಿವ ಪ್ರಮೋದ್ ಮದ್ವರಾಜ ಉದ್ಘಾಟಿಸಿದರು
ಶಿರಸಿಯಲ್ಲಿ ಆಯೋಜಿಸಿದ್ದ ಗಂಗಾಮತಸ್ಥರ ಸಭೆಯನ್ನು ಮಾಜಿ ಸಚಿವ ಪ್ರಮೋದ್ ಮದ್ವರಾಜ ಉದ್ಘಾಟಿಸಿದರು   

ಶಿರಸಿ: ರಾಜ್ಯದ 10 ಲೋಕಸಭಾ ಕ್ಷೇತ್ರಗಳಲ್ಲಿ ಮೀನುಗಾರ ಸಮಾಜದ ನಿರ್ಣಾಯಕ ಮತದಾರರಿದ್ದರೂ ಕೂಡ  ಮೀನುಗಾರರ ಒಳಿತಿಗಾಗಿ ಹೋರಾಡಲು ಯಾವುದೇ ಪಕ್ಷದಲ್ಲಿ ನಾಯಕರಿಲ್ಲದ ಸ್ಥಿತಿ ಎದುರಾಗಿದೆ ಎಂದು ಮಾಜಿ ಸಚಿವ ಪ್ರಮೋದ್ ಮದ್ವರಾಜ ಹೇಳಿದರು.

ನಗರದ ಭಾರತ ಸೇವಾದಳ ಸಭಾಂಗಣದಲ್ಲಿ ಗಂಗಾಮತಸ್ಥರ ಕ್ಷೇಮಾಭಿವೃದ್ಧಿ ಸಂಘ ಶಿರಸಿ ಘಟಕ ಮತ್ತು ಪುಣ್ಯಕೋಟಿ ಅಂಬಿಗ ಮೀನುಗಾರರ ಸಂಘದ ಸ್ಥಳೀಯ ಶಾಖೆ ಆಶ್ರಯದಲ್ಲಿ ಗುರುವಾರ ಸಮಾಜದ ಮುಖಂಡರ ಸಭೆ ನಡೆಸಿ ಅವರು ಮಾತನಾಡಿದರು. 

‘ರಾಜ್ಯದಲ್ಲಿ ಮೀನುಗಾರ ಸಮಾಜಕ್ಕೆ ನಾಯಕತ್ವದ ಕೊರತೆಯಿದೆ. ರಾಜ್ಯದಲ್ಲಿ 70 ಲಕ್ಷ ಜನಸಂಖ್ಯೆ ಇದ್ದು, ಸುಮಾರು 70 ವಿಧಾನ ಸಭಾ ಕ್ಷೇತ್ರ ಮತ್ತು 10 ಲೋಕಸಭಾ ಕ್ಷೇತ್ರದಲ್ಲಿ ಈ ಸಮಾಜದ ಯಾವೊಬ್ಬ ನಾಯಕನಿಲ್ಲದಿರುವುದು ವಿಷಾದನೀಯ ಎಂದರು. ಸಮುದಾಯಕ್ಕೆ ಸಮರ್ಥ ನಾಯಕತ್ವ ಬೇಕಿರುವ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭೆಯ ಚುನಾವಣೆಯಲ್ಲಿ ನಮ್ಮ ಸಮಾಜದ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲ್ಲಿಸಬೇಕೆಂದು ಕರೆ ಕೊಟ್ಟರು‌. 

ADVERTISEMENT

ಸಭೆಯಲ್ಲಿ ಮಾಜಿ ಶಾಸಕ ವಿವೇಕಾನಂದ ವೈದ್ಯ, ಪ್ರಮುಖರಾದ ದ್ಯಾಮಣ್ಣ ದೊಡ್ಮನಿ, ನಟರಾಜ ಹೊಸೂರು, ವಸಂತ ಕೋನಸಾಲಿ, ಪ್ರಕಾಶ ಬಂಗ್ಲೆ, ಬಿ.ಡಿ.ರವಿಕುಮಾರ ಮುಂತಾದವರು ಮಾತನಾಡಿದರು. ಶಿರಸಿ, ಮುಂಡಗೋಡ, ಬನವಾಸಿ, ದನಗನಹಳ್ಳಿ, ರಾಮಾಪುರ, ತಿಗಣಿ, ಕೋರ್ಲಕಟ್ಟಾ, ಕಬ್ಬೆ, ಕಡಗೋಡ, ಸಿದ್ದಾಪುರ, ನೆಜ್ಜುರ್ ಗ್ರಾಮಗಳಿಂದ ಸಮುದಾದಯದ ಪ್ರಮುಖರು ಆಗಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.