ADVERTISEMENT

ಕೋವಿಡ್‌ನಿಂದ ಆರು ಮಂದಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 15:03 IST
Last Updated 20 ಜೂನ್ 2020, 15:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾರವಾರ: ಕೋವಿಡ್ 19ನಿಂದ ಗುಣಮುಖರಾದ ಆರು ಮಂದಿಯನ್ನು ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್ ವಾರ್ಡ್‌ನಿಂದ ಶನಿವಾರ ಬಿಡುಗಡೆ ಮಾಡಲಾಯಿತು. ‌

ಸೋಂಕು ಮುಕ್ತರಾದವರಲ್ಲಿ ಹಳಿಯಾಳದ ಇಬ್ಬರು, ದಾಂಡೇಲಿಯ ಇಬ್ಬರು, ಕಾರವಾರ ಮತ್ತು ಕುಮಟಾದ ತಲಾ ಒಬ್ಬರು ಸೇರಿದ್ದಾರೆ. ದಾಂಡೇಲಿಯ 24 ಹಾಗೂ 34 ವರ್ಷದ ಇಬ್ಬರು ಯುವಕರು, ಕಾರವಾರದ 24 ವರ್ಷದ ಮಹಿಳೆ, ಹಳಿಯಾಳದ 14 ವರ್ಷದ ಬಾಲಕಹಾಗೂ25 ವರ್ಷದ ಮಹಿಳೆ, ಕುಮಟಾದ 54 ವರ್ಷದ ವ್ಯಕ್ತಿ ಆಸ್ಪತ್ರೆಯಿಂದ ಬಿಡುಗಡೆಯಾದರು.

ಈ ನಡುವೆ,ಜಿಲ್ಲೆಯಲ್ಲಿಮತ್ತೆನಾಲ್ವರಿಗೆ ಕೋವಿಡ್ 19 ದೃಢಪಟ್ಟಿದೆ. ಮಹಾರಾಷ್ಟ್ರದಿಂದ ಕುಮಟಾಕ್ಕೆ ವಾಪಸಾಗಿರುವ 26 ವರ್ಷದ ಮಹಿಳೆ, ಮುಂಬೈನಿಂದ ಭಟ್ಕಳಕ್ಕೆ ಬಂದಿರುವ 24ರ ಯುವಕ, 45 ವರ್ಷದ ಪುರುಷ ಹಾಗೂ ದುಬೈನಿಂದ ಭಟ್ಕಳಕ್ಕೆ ವಾಪಸಾಗಿರುವ 36 ವರ್ಷದ ಮಹಿಳೆಗೆ ಸೋಂಕು ಖಚಿತವಾಗಿದೆ.ಈ ಮೂಲಕ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 31ಕ್ಕೇರಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.