ADVERTISEMENT

ಕಾರವಾರ: ನಿಯಮ ಉಲ್ಲಂಘಿಸಿದವರಿಗೆ ಗುಲಾಬಿ, ಚಾಕೊಲೇಟ್!

ಜಿಲ್ಲೆಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ: ನಿಯಮ ಉಲ್ಲಂಘಿಸದಂತೆ ಪ್ರತಿಜ್ಞೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 17:23 IST
Last Updated 23 ನವೆಂಬರ್ 2020, 17:23 IST
‘ರಸ್ತೆ ಸುರಕ್ಷತಾ ಸಪ್ತಾಹ’ಕ್ಕೆ ಕಾರವಾರದಲ್ಲಿ ಸೋಮವಾರ ಚಾಲನೆ ನೀಡಿದ ಎಸ್‌.ಪಿ ಶಿವಪ್ರಕಾಶ ದೇವರಾಜು, ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಗುಲಾಬಿ ಹೂ ನೀಡಿ ತಿಳಿವಳಿಕೆ ಮೂಡಿಸಿದರು
‘ರಸ್ತೆ ಸುರಕ್ಷತಾ ಸಪ್ತಾಹ’ಕ್ಕೆ ಕಾರವಾರದಲ್ಲಿ ಸೋಮವಾರ ಚಾಲನೆ ನೀಡಿದ ಎಸ್‌.ಪಿ ಶಿವಪ್ರಕಾಶ ದೇವರಾಜು, ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಗುಲಾಬಿ ಹೂ ನೀಡಿ ತಿಳಿವಳಿಕೆ ಮೂಡಿಸಿದರು   

ಕಾರವಾರ: ‘ರಸ್ತೆ ಸುರಕ್ಷತಾ ಸಪ್ತಾಹ’ಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ನಗರದಲ್ಲಿ ಸೋಮವಾರ ಚಾಲನೆ ನೀಡಿದರು. ಸಂಚಾರ ನಿಯಮಗಳನ್ನು ಉಲ್ಲಂಘಿಸಿದವರಿಗೆ ಗುಲಾಬಿ ಹೂ ಹಾಗೂ ಚಾಕೊಲೇಟ್‌ಗಳನ್ನು ನೀಡಿ, ತಿಳಿವಳಿಕೆ ನೀಡಲಾಯಿತು.

ನಗರದ ಗ್ರೀನ್‌ಸ್ಟ್ರೀಟ್‌ನ ಸುಭಾಸ್ ವೃತ್ತ, ಹೂವಿನ ಚೌಕಿ ಬಳಿ ನಡೆದ ಕಾರ್ಯಕ್ರಮಗಳಲ್ಲಿ ಪೊಲೀಸರು ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಹೆಲ್ಮೆಟ್ ಹಾಗೂ ಸೀಟ್‌ ಬೆಲ್ಟ್ ಧರಿಸುವುದು, ವಾಹನ ಸಂಚಾರದ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದರು. ಇದೇ ವೇಳೆ, ನಿಯಮಗಳನ್ನು ಉಲ್ಲಂಘಿಸಿದವರನ್ನು ತಡೆದು ಅರಿವು ಮೂಡಿಸಿ ಮುಂದೆ ನಿಯಮ ಉಲ್ಲಂಘಿಸದಂತೆ ಪ್ರತಿಜ್ಞೆ ಮಾಡಿಸಲಾಯಿತು.

ನಗರ, ಗ್ರಾಮೀಣ ಹಾಗೂ ಸಂಚಾರ ಘಟಕಗಳ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಸಂದರ್ಭದಲ್ಲಿ ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.