ADVERTISEMENT

ಅರ್ಥಪೂರ್ಣವಾಗಿ ನಡೆದ ಶ್ರೀರಾಮ ನಿರ್ಯಾಣ ಯಕ್ಷಗಾನ ತಾಳಮದ್ದಳೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2024, 14:30 IST
Last Updated 15 ಸೆಪ್ಟೆಂಬರ್ 2024, 14:30 IST
ಸಿದ್ದಾಪುರ ತಾಲ್ಲೂಕಿನ ಜಾಗಣೆ ಭಗವಾನ್ ವೇದಿಕೆಯಲ್ಲಿ ಶ್ರೀರಾಮ ನಿರ್ಯಾಣ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು
ಸಿದ್ದಾಪುರ ತಾಲ್ಲೂಕಿನ ಜಾಗಣೆ ಭಗವಾನ್ ವೇದಿಕೆಯಲ್ಲಿ ಶ್ರೀರಾಮ ನಿರ್ಯಾಣ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು    

ಸಿದ್ದಾಪುರ: ತಾಲ್ಲೂಕಿನ ಜಾಗಣೆ ಭಗವಾನ್ ವೇದಿಕೆಯಲ್ಲಿ ದಿವಂಗತ ಶಿವರಾಮ ಮಹಾಬಲೇಶ್ವರ ಹೆಗಡೆ ಇವರ ವೈಕುಂಠ ಸಮಾರಾಧನೆ ಅಂಗವಾಗಿ ಕಲಾಭಾಸ್ಕರ ಇಟಗಿ ಇವರು ನಡೆಸಿದ ಕವಿ ಹೊಸತೋಟ ಮಂಜುನಾಥ ಭಾಗವತ ವಿರಚಿತ ಶ್ರೀರಾಮ ನಿರ್ಯಾಣ ಎಂಬ ಯಕ್ಷಗಾನ ತಾಳಮದ್ದಳೆ ಶುಕ್ರವಾರ ಅರ್ಥಪೂರ್ಣವಾಗಿ ನಡೆಯಿತು.

ಭಾಗವತರಾಗಿ ಕೇಶವ ಹೆಗಡೆ ಕೊಳಗಿ, ಮದ್ದಳೆವಾದನದಲ್ಲಿ ಅನಿರುದ್ಧ ಹೆಗಡೆ ವರ್ಗಾಸರ ಸಹಕರಿಸಿದರು.

ಶ್ರೀರಾಮನಾಗಿ ಉಜಿರೆ ಅಶೋಕ ಭಟ್ಟ, ಲಕ್ಷ್ಮಣನಾಗಿ ದಿವಾಕರ ಹೆಗಡೆ ಕೆರೆಹೊಂಡ ಕಾಲಪುರುಷನಾಗಿ ಇಟಗಿ ಮಹಾಬಲೇಶ್ವರ ಭಟ್ಟ, ದುರ್ವಾಸನಾಗಿ ವಿನಾಯಕ ಹೆಗಡೆ ಕವಲಕೊಪ್ಪ, ಹನುಮಂತನಾಗಿ ಕೃಷ್ಣಮೂರ್ತಿ ಭಟ್ಟ ನೆಲೆಮಾವು ಪಾತ್ರ ನಿರ್ವಹಿಸಿದರು. ಪ್ರದೀಪ ಶಿವರಾಮ ಹೆಗಡೆ ಸ್ವಾಗತಿಸಿದರು. ಸಂದೀಪ ಶಿವರಾಮ ಹೆಗಡೆ ವಂದಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.