ADVERTISEMENT

ಸಿದ್ದಾಪುರ| ವಿದ್ಯಾರ್ಥಿಗಳು ದೇಶದ ಆಸ್ತಿ: ಶಾಸಕ ಭೀಮಣ್ಣ

​ಪ್ರಜಾವಾಣಿ ವಾರ್ತೆ
Published 2 ಜುಲೈ 2023, 14:11 IST
Last Updated 2 ಜುಲೈ 2023, 14:11 IST
ಸಿದ್ದಾಪುರ ಸರ್ಕಾರಿ ಪದವಿ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಶಾಸಕ ಭೀಮಣ್ಣ ನಾಯ್ಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು
ಸಿದ್ದಾಪುರ ಸರ್ಕಾರಿ ಪದವಿ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಶಾಸಕ ಭೀಮಣ್ಣ ನಾಯ್ಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು   

ಸಿದ್ದಾಪುರ: ವಿದ್ಯಾರ್ಥಿಗಳು ಕಲಿಕೆ ಸಂದರ್ಭದಲ್ಲಿ ಆಸಕ್ತಿಯಿಂದ ಉತ್ತಮ ಶಿಕ್ಷಣ ಪಡೆದು ರಾಜ್ಯ, ದೇಶಕ್ಕೆ ಆಸ್ತಿಯಾಗಬೇಕು. ದೇಶ ನಿರ್ಮಾಣದಲ್ಲಿ ಯುವಜನತೆ ಪಾತ್ರ ಮುಖ್ಯ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ತಾಲ್ಲೂಕಿನ ಬೇಡ್ಕಣಿ ಸಮೀಪದ ಸರ್ಕಾರಿ ಪದವಿ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ಭಾಗದ ವಿದ್ಯಾರ್ಥಿಗಳು ಹಸಿರು ಪರಿಸರ ಉಳಿಸಲು ಪಣತೊಡಬೇಕು. ಪರಿಸರ, ಅರಣ್ಯವಿದ್ದರೆ ಮನುಕುಲವೂ ಉಳಿಯಲಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಸರ್ಕಾರ ಕಲ್ಪಿಸಿದ ಶೈಕ್ಷಣಿಕ ವ್ಯವಸ್ಥೆಯ ಸದ್ಬಳಕೆ ಮಾಡಿಕೊಂಡು ಸಾಧನೆ ಮಾಡಬೇಕು. ಸಿದ್ದಾಪುರ ಕಾಲೇಜು ಇನ್ನೂವರೆಗೂ ನ್ಯಾಕ್ ಮಾನ್ಯತೆ ಪಡೆದಿಲ್ಲ. ಈ ಬಗ್ಗೆ ಕಾಲೇಜು ಪ್ರಮುಖರು ಲಕ್ಷ್ಯ ವಹಿಸಿ, ಕಾಲೇಜು ಅಭಿವೃದ್ದಿ, ಶೈಕ್ಷಣಿಕ ಸುಧಾರಣೆ ದೃಷ್ಟಿಯಿಂದ,ಮಕ್ಕಳ ಹಿತದೃಷ್ಟಿಯಿಂದ ನ್ಯಾಕ್ ಮಾನ್ಯತೆ ಪಡೆಯಬೇಕು ಎಂದರು.

ADVERTISEMENT

ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು. ಕಾಲೇಜು ಪ್ರಾಚಾರ್ಯರು, ಉಪನ್ಯಾಸಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.