ADVERTISEMENT

ಬಿ.ಇಡಿ ಪರೀಕ್ಷೆ ಮುಂದಕ್ಕೆ: ಪ್ರಶಿಕ್ಷಣಾರ್ಥಿಗಳ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 4 ಮೇ 2019, 12:58 IST
Last Updated 4 ಮೇ 2019, 12:58 IST

ಕಾರವಾರ:ಬಿ.ಇಡಿ ಒಂದು ಮತ್ತು ಮೂರನೇ ಸೆಮಿಸ್ಟರ್‌ನ ಕನ್ನಡ ಆವೃತ್ತಿಯ ಪ್ರಶ್ನೆ ಪತ್ರಿಕೆಗಳಲ್ಲಿ ಕಾಗುಣಿತ ತಪ್ಪುಗಳಿದ್ದವುಎಂದು ಪರೀಕ್ಷೆಗಳನ್ನು ಮುಂದೂಡಿದ್ದಕ್ಕೆಪ್ರಶಿಕ್ಷಣಾರ್ಥಿಗಳುಆಕ್ಷೇಪಿಸಿದ್ದಾರೆ. ಅಲ್ಲದೇ ಮುಂದಿನ ದಿನಾಂಕವನ್ನು ಕರ್ನಾಟಕ ವಿಶ್ವವಿದ್ಯಾಲಯ ತಿಳಿಸದೇ ಗೊಂದಲವಾಗಿದೆ ಎಂದು ದೂರಿದ್ದಾರೆ.

‘ಒಂದೇ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡದೊಂದಿಗೇ ಇಂಗ್ಲಿಷ್ ಆವೃತ್ತಿಯೂ ಇರುತ್ತದೆ. ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಅದನ್ನು ನೋಡಿ ಉತ್ತರ ಬರೆದಿದ್ದಾರೆ. ಅಲ್ಲದೇ ಕಾಗುಣಿತ ತಪ್ಪುಗಳಿದ್ದರೂ ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳಲು ಸಮಸ್ಯೆಯಾಗಲಿಲ್ಲ. ಹಾಗಾಗಿ ಉತ್ತರ ಬರೆಯಲು ಏನೂ ಸಮಸ್ಯೆಯಾಗಲಿಲ್ಲ. ಇನ್ನೊಂದು ಪರೀಕ್ಷೆ ಇದ್ದಾಗ ಮುಂದೂಡಿದ್ದಾರೆ. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೇ ಹೊರತು ‌ನಮಗೆ ಯಾಕೆ ತೊಂದರೆ ಕೊಡಬೇಕು’ ಎಂಬುದುಕನ್ನಡ ಆವೃತ್ತಿಯಪ್ರಶ್ನೆ ಪತ್ರಿಕೆ ಬಳಸಿದ ಪ್ರಶಿಕ್ಷಣಾರ್ಥಿಯೊಬ್ಬರಪ್ರಶ್ನೆಯಾಗಿದೆ.

‘ಮೇ 5ರವರೆಗೆ ನಡೆಯಲಿರುವ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದಷ್ಟೇ ಹೇಳಿದ್ದಾರೆ. ಪರೀಕ್ಷೆಗಳು ಆದ ಬಳಿಕದೂರದ ದೂರದ ಊರುಗಳಿಗೆ ಹೋಗುವವರು ಇದ್ದಾರೆ. ಅವರಿಗೆಲ್ಲ ತೊಂದರೆಯಾಗಿದೆ. ಅದೂ ಅಲ್ಲದೇ ಪ್ರಶ್ನೆ ಪತ್ರಿಕೆಗಳಲ್ಲಿ ತಪ್ಪುಗಳಿದ್ದರೆ ಕಾಲೇಜಿನಿಂದಲೇ ಅವುಗಳನ್ನು ಹೇಳ್ತಾರೆ. ಪರೀಕ್ಷೆ ಮುಂದೂಡಬೇಕಾದ ಅಗತ್ಯವಿರಲಿಲ್ಲ’ ಎಂಬ ಆಕ್ಷೇಪ ಇಂಗ್ಲಿಷ್ ಆವೃತ್ತಿಯ ಪ್ರಶ್ನೆ ಪತ್ರಿಕೆ ಬಳಸಿದ ಪ್ರಶಿಕ್ಷಣಾರ್ಥಿಯದ್ದಾಗಿದೆ.

ADVERTISEMENT

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರಕ್ರಿಯಿಸಿದಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ (ಪರೀಕ್ಷಾಂಗ) ಎನ್.ಎಂ.ಸಾಲಿ, ‘ಕನ್ನಡ ಆವೃತ್ತಿಯಲ್ಲಿ ತಪ್ಪುಗಳ ಸರಮಾಲೆ ಎಂಬ ಆರೋಪಗಳು ಬಂದವು. ಕನ್ನಡದಲ್ಲೇ ಈ ರೀತಿ ಆಗಬಾರದು ಎಂದು ಪ್ರಶ್ನೆ ಪತ್ರಿಕೆಗಳನ್ನು ಪುನಃ ಪರಿಶೀಲನೆ ಮಾಡಲಿದ್ದೇವೆ. ಹಾಗಾಗಿ ಪರೀಕ್ಷೆಗಳನ್ನುಮುಂದೂಡಲಾಗಿದೆ. ಈಗಾಗಲೇ ಆಗಿರುವ ಪರೀಕ್ಷೆಗಳನ್ನು ಮತ್ತೊಮ್ಮೆಹಮ್ಮಿಕೊಳ್ಳುವುದಿಲ್ಲ. ಈ ಬಗ್ಗೆ ಗೊಂದಲಗಳು ಬೇಡ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.