ಸಿದ್ದಾಪುರ: ‘ಕೆಲಸದಲ್ಲಿ ಆಸಕ್ತಿ, ಬದ್ಧತೆ ಹಾಗೂ ಶ್ರಮ ಇದ್ದರೆ ಯಶಸ್ಸು ಸಾಧ್ಯ ಎನ್ನುವುದಕ್ಕೆ ಕೇಶವ ಹೆಗಡೆ ಕೊಳಗಿ ಪ್ರತ್ಯಕ್ಷ ಉದಾಹರಣೆ. ಅವರು ಯಕ್ಷಗಾನ ರಂಗದಲ್ಲಿ ಸಾಧನೆ ಮಾಡಿದ ಫಲವಾಗಿ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾರೆ’ ಎಂದು ಸಿದ್ದಾಪುರ ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಶಶಿಭೂಷಣ ಹೆಗಡೆ ದೊಡ್ಮನೆ ಹೇಳಿದರು.
ಪಟ್ಟಣದ ನೆಹರೂ ಮೈದಾನದಲ್ಲಿ ಸಾಲಿಗ್ರಾಮದ ಗುರುಪ್ರಸಾದಿತ ಯಕ್ಷಗಾನ ಮಂಡಳಿಯಿಂದ ಪ್ರದರ್ಶನಗೊಂಡ ಶುಭಲಕ್ಷಣ ಯಕ್ಷಗಾನದಲ್ಲಿ ಯಕ್ಷಗಾನ ಭಾಗವತ ಕೇಶವ ಹೆಗಡೆ ಕೊಳಗಿ ಅವರಿಗೆ ತಾಲ್ಲೂಕಿನ ಯಕ್ಷಗಾನ ಅಭಿಮಾನಿಗಳು ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇಶವ ಹೆಗಡೆ ಕೊಳಗಿ ಮಾತನಾಡಿದರು. ಡಾ.ಕೆ.ಶ್ರೀಧರ ವೈದ್ಯ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಗಂಗಾಧರ ಕೊಳಗಿ ಅಭಿನಂದನಾ ಮಾತನಾಡಿದರು.
ಸಾಲಿಗ್ರಾಮ ಮೇಳದ ಭಾಗವತರಾದ ಚಂದ್ರಕಾಂತ ಮೂಡಬೆಳ್ಳೆ, ಪ್ರಶಾಂತ ಶೆಟ್ಟಿಗಾರ, ಈಶ್ವರ ನಾಯ್ಕ ಮಂಕಿ, ಶಶಿಕಾಂತ ಶೆಟ್ಟಿ, ಮಹಾಬಲೇಶ್ವರ ಭಟ್ಟ ಕ್ಯಾದಗಿ ಅವರನ್ನು ಸಂಘಟಕರು ಸನ್ಮಾನಿಸಿದರು.
ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ವಕೀಲ ಜಿ.ಎಸ್. ಹೆಗಡೆ ಬೆಳ್ಳೆಮಡಕಿ, ಟಿಎಸ್‍ಎಸ್ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ, ಉದ್ಯಮಿ ಉಪೇಂದ್ರ ಪೈ, ವಿ. ವಿನಾಯಕ ಭಟ್ಟ ಮತ್ತೀಹಳ್ಳಿ, ಸಂಘಟಕರಾದ ಸತೀಶ ಹೆಗಡೆ ಬೈಲಳ್ಳಿ, ರವಿ ನಾಯ್ಕ ಜಾತಿಕಟ್ಟೆ, ಸುಧೀರ್ ಕೊಂಡ್ಲಿ, ನಾಗರಾಜ ಗೊದ್ಲಬೀಳ, ನಟರಾಜ ಹೆಗಡೆ, ಕೇಶವ ಹೆಗಡೆ ಕಿಬ್ಳೆ ಇದ್ದರು.
ಎಸ್.ಕೆ. ಮೇಸ್ತಾ, ಹರೀಶ ಗೌಡರ್, ನಾಗರಾಜ ನಾಯ್ಕ ಬೇಡ್ಕಣಿ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.