
ಪ್ರಜಾವಾಣಿ ವಾರ್ತೆ
ಹೊನ್ನಾವರ: ಅರೇಅಂಗಡಿಯಲ್ಲಿ ಫೆ.14ರಂದು ನಡೆಯಲಿರುವ ತಾಲ್ಲೂಕು 12ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಶಿಕ್ಷಕ ಹಾಗೂ ಬರಹಗಾರ ಸುರೇಶ ನಾಯ್ಕ ಮಂಕಿ ಆಯ್ಕೆಯಾಗಿದ್ದಾರೆ.
ಇಲ್ಲಿಯ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಸೋಮವಾರ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಚ್.ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುರೇಶ ನಾಯ್ಕ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಪ್ರಸ್ತುತ ಕೊಟೇಬೈಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಸುರೇಶ ಮುಖ್ಯ ಶಿಕ್ಷಕರಾಗಿದ್ದಾರೆ. ಮಂಕಿಪುರ ಸೇರಿದಂತೆ 8 ಸಾಹಿತ್ಯ ಕೃತಿಗಳನ್ನು, ಹಲವು ಹನಿಗವನಗಳನ್ನು ರಚಿಸಿದ್ದಾರೆ ಎಂದು ಕಸಾಪ ತಾಲ್ಲೂಕು ಘಟಕದ ಪ್ರಕಟಣೆ ತಿಳಿಸಿದೆ.