ADVERTISEMENT

ಕುಮಟಾ | ಕಲಬೆರಕೆ ಅನುಮಾನ: ಹಸುವಿನ ತುಪ್ಪ ವಶ

​ಪ್ರಜಾವಾಣಿ ವಾರ್ತೆ
Published 29 ಜನವರಿ 2025, 13:39 IST
Last Updated 29 ಜನವರಿ 2025, 13:39 IST
ತುಪ್ಪ/ಸಾಂದರ್ಭಿಕ ಚಿತ್ರ
ತುಪ್ಪ/ಸಾಂದರ್ಭಿಕ ಚಿತ್ರ   

ಕುಮಟಾ: ಕಲಬೆರಕೆ ಅನುಮಾನದ ಹಿನ್ನೆಲೆಯಲ್ಲಿ ಮಂಗಳವಾರ ಬೀದಿ ಬದಿ ಮಾರಾಟ ಮಾಡುತ್ತಿದ್ದ ಹಸುವಿನ ತುಪ್ಪವನ್ನು ಆಹಾರ ಸುರಕ್ಷತಾ ಅಧಿಕಾರಿಗಳು ವಶಪಡಿಸಿಕೊಂಡು ಗುಣಮಟ್ಟ ವಿಶ್ಲೇಷಣೆಗಾಗಿ ಅದನ್ನು ಪ್ರಯೋಗಾಲಯಕ್ಕೆ ಕಳಿಸಿದ್ದಾರೆ.

`ಬಳ್ಳಾರಿಯ ಶಂಕರ ರಾಮಲಿಂಗಪ್ಪ ಎಂಬಾತನಿಂದ ತಲಾ 900 ಗ್ರಾಂ ಅಳತೆಯ 25 ಬಾಟಲಿ ತುಪ್ಪವನ್ನು ವಶಪಡಿಸಿಕೊಳ್ಳಲಾಗಿದೆ. ಈತ ಹೊನ್ನಾವರ ವಸತಿ ಗೃಹದಲ್ಲಿ ಉಳಿದುಕೊಂಡು ಬೀದಿ ಬದಿಯಲ್ಲಿ ತುಪ್ಪ ಮಾರಾಟ ಮಾಡುತ್ತಿದ್ದ. ಕುಮಟಾದಲ್ಲಿ ವಿಜಯೇಂದ್ರ ಬಿಳಗಿ ಎನ್ನುವವರು ಆತನಿಂದ ತುಪ್ಪ ಖರೀದಿ ಮಾಡುವಾಗ ಕಲಬೆರಕೆಯ ಅನುಮಾನ ಬಂದು ಕುಮಟಾ ಪೊಲೀಸರಿಗೆ ದೂರು ನೀಡಿದ್ದರು’ ಎಂದು ಉತ್ತರ ಕನ್ನಡ ಆಹಾರ ಸುರಕ್ಷತಾ ಅಧಿಕಾರಿ ಅರುಣ ಭಟ್ಟ ಕಾಶಿ ಮಾಹಿತಿ ನೀಡಿದರು.

‘ತುಪ್ಪದ ವ್ಯಾಪಾರಿಯ ಎಲ್ಲ ಮಾಹಿತಿ ಪಡೆಯಲಾಗಿದ್ದು, ತುಪ್ಪ ಕಲಬೆರಕೆ ಎಂದು ವರದಿ ಬಂದಲ್ಲಿ  ಆಹಾರ ಸುರಕ್ಷತಾ ನಿಯಮದ ಬೇರೆ ಬೇರೆ ಕಾನೂನಿನಡಿ ವ್ಯಾಪಾರಿ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.