
ಕಾರವಾರ: ಕುಮಟಾ ತಾಲ್ಲೂಕಿನ ತದಡಿ ಭಾಗದಲ್ಲಿ ಪ್ರವಾಸಿ ಬೋಟ್‌ಗಳಿಗೆ ದಾಖಲೆ ಪರಿಶೀಲನೆ ನೆಪದಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಆ ಭಾಗದ ಪ್ರವಾಸಿ ಬೋಟ್ಗಳ ಮಾಲೀಕರು ಸೋಮವಾರ ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರಿಗೆ ದೂ ಸಲ್ಲಿಸಿದರು.
‘ಮೀನುಗಾರಿಕೆ ಚಟುವಟಿಕೆ ನಂಬಿ ಜೀವನ ಸಾಗಿಸುತ್ತಿದ್ದ ಕುಟುಂಬಗಳು ಮೀನುಗಾರಿಕೆ ಪ್ರಮಾಣ ಕಡಿಮೆಯಾದ ಬಳಿಕ ಪ್ರವಾಸಿ ಬೋಟ್‌ಗಳನ್ನು ನಡೆಸುತ್ತಿದ್ದೇವೆ. ₹20 ಲಕ್ಷದಿಂದ 25 ಲಕ್ಷ ಬೆಲೆಬಾಳುವ ಬೋಟ್‌ಗಳನ್ನು ಖರೀದಿಸಿ ಕಳೆದ 5-6 ವರ್ಷಗಳಿಂದ ಯಾವುದೇ ಸಮಸ್ಯೆಗಳಿಲ್ಲದೇ ನಡೆಸಿಕೊಂಡು ಬಂದಿದ್ದೇವೆ. ಆದರೆ, ಈಚೆಗೆ ಅಧಿಕಾರಿಗಳ ಕಿರುಕುಳ ಹೆಚ್ಚಿದೆ’ ಎಂದು ದೂರಿದರು.
‘ಪ್ರವಾಸಿ ಬೋಟ್ ಚಟುವಟಿಕೆಯಲ್ಲಿ ಏಕಸ್ವಾಮ್ಯತೆ ಸಾಧಿಸುವ ದುರುದ್ದೇಶದಿಂದ ಕೆಲವರು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿರುವ ಶಂಕೆ ಇದೆ. ಪ್ರವಾಸೋದ್ಯಮ, ಬಂದರು ಇಲಾಖೆ ಮತ್ತು ಕರಾವಳಿ ಕಾವಲು ಪಡೆಯ ಅಧಿಕಾರಿ ವರ್ಗದವರು ದಾಖಲೆ ಪರಿಶೀಲನೆ ನೆಪದಲ್ಲಿ ತೊಂದರೆ ನೀಡುತ್ತಿದ್ದಾರೆ. ಈಚೆಗೆ ವ್ಯಕ್ತಿಯೊಬ್ಬರು ಮೃತಪಟ್ಟ ಕಾರಣ ಮುಂದಿಟ್ಟು ಪ್ರವಾಸಿ ಬೋಟ್ ಚಟುವಟಿಕೆ ಸ್ಥಗಿತಗೊಳಿಸುವ ಪ್ರಯತ್ನ ನಡೆದಿದೆ’ ಎಂದು ಆರೋಪಿಸಿದರು.
ರವಿ ನಾಯ್ಕ ಸೇರಿದಂತೆ ಹಲವು ಬೋಟ್‌ಗಳ ಮಾಲೀಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.