ADVERTISEMENT

ಇಸ್ಪೀಟ್: 10 ಜನರ ಬಂಧನ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 7:12 IST
Last Updated 14 ಜುಲೈ 2025, 7:12 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಭಟ್ಕಳ: ತಾಲ್ಲೂಕಿನ ಮಾವಿನಕುರ್ವೆ ಬಂದರು ಪ್ರದೇಶದಲ್ಲಿ ಇಸ್ಪೀಟ್ ಆಡುತ್ತಿದ್ದ ಗುಂಪಿನ ಮೇಲೆ ಭಾನುವಾರ ದಾಳಿ ನಡೆಸಿದ ಗ್ರಾಮೀಣ ಠಾಣೆ ಸಿಪಿಐ ಮಂಜುನಾಥ ಲಿಂಗಾರೆಡ್ಡಿ ತಂಡ 10 ಜನರನ್ನು ಬಂಧಿಸಿ, 4938 ನಗದು ಹಾಗೂ 4 ಸೈಕಲ್ ವಶಪಡಿಸಿಕೊಂಡಿದ್ದಾರೆ.

ADVERTISEMENT

ಮಾವಿನಕರ್ವಾ ನಿವಾಸಿ ರಾಘವೇಂದ್ರ ‌ವೀರಮಾಸ್ತಿ ಖಾರ್ವಿ, ನಾಗೇಶ ಲಕ್ಷ್ಮಣ ಖಾರ್ವಿ, ಗೋವಿಂದ ನಾರಾಯಣ ಖಾರ್ವಿ, ಶ್ರೀನಿವಾಸ ನಾರಾಯಣ ಖಾರ್ವಿ, ಪಾಂಡುರಂಗ ದೇವಯ್ಯ ಖಾರ್ವಿ, ರಾಮಚಂದ್ರ ಜಟ್ಟಪ್ಪ ನಾಯ್ಕ ತಗ್ಗರಗೋಡ ಸನಾವುಲ್ಲಾ ಖಾದರ ಬಾಷಾ ತಟ್ಟಿಹಕ್ಕಲ ನಿವಾಸಿ ಮೋಹನ ಮಂಜುನಾಥ ದೇವಡಿಗ ಬಂಧಿತರು. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.