ADVERTISEMENT

ಹೆಬ್ಬಾರ ಉಚ್ಚಾಟನೆಯಿಂದ ವಾತಾವರಣ ತಿಳಿ: ರೂಪಾಲಿ

​ಪ್ರಜಾವಾಣಿ ವಾರ್ತೆ
Published 29 ಮೇ 2025, 14:55 IST
Last Updated 29 ಮೇ 2025, 14:55 IST

ಯಲ್ಲಾಪುರ (ಉತ್ತರ ಕನ್ನಡ): ‘ಶಾಸಕ ಶಿವರಾಮ ಹೆಬ್ಬಾರ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವುದರಿಂದ ಕಾರ್ಯಕರ್ತರಲ್ಲಿ ಗೊಂದಲ ನಿವಾರಣೆಯಾಗಿದ್ದು, ಪಕ್ಷದಲ್ಲಿ ತಿಳಿಯಾದ ವಾತಾವರಣ ನಿರ್ಮಾಣವಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಹೇಳಿದರು.

ಬುಧವಾರ ಇಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ಪಕ್ಷಾಂತರ ಹವ್ಯಾಸ ಒಳ್ಳೆಯದಲ್ಲ. ಬಿಜೆಪಿ ತನಗೆ ಮೋಸ ಮಾಡಿದೆ, ಪಕ್ಷದ ಕೆಲವರು ನನ್ನನ್ನು ಸೋಲಿಸಲು ಪ್ರಯತ್ನಿಸಿದರು ಎನ್ನುವುದು ಶುದ್ಧ ಸುಳ್ಳು. ಬದಲಾಗಿ ಹೆಬ್ಬಾರ ಅವರ ನಡೆಯಿಂದ ಪಕ್ಷದ ಅನೇಕ ಕಾರ್ಯಕರ್ತರಿಗೆ ಮೋಸವಾಗಿದೆ. ಪಕ್ಷ ಅವರಿಗೆ ಸಾಕಷ್ಟು ಅವಕಾಶ ಕೊಟ್ಟಾಗಲೂ ಅವರು ಉಚ್ಚಾಟಿಸುವ ಮುನ್ನವೇ ಹೊರಹೋಗಿದ್ದಾರೆ’ ಎಂದು ದೂರಿದರು.

‘ಯಲ್ಲಾಪುರ ಕ್ಷೇತ್ರದಲ್ಲಿ ಪಕ್ಷ ಗಟ್ಟಿಯಾಗಿದೆ. ಬರುವ ದಿನಗಳಲ್ಲಿ ಸಂಘಟನಾತ್ಮಕವಾಗಿ ಇನ್ನಷ್ಟು ಬೆಳೆಯಲಿದೆ. ಇಲ್ಲಿ ವ್ಯಕ್ತಿ ಮುಖ್ಯ ಅಲ್ಲ. ಪಕ್ಷ ಮುಖ್ಯ’ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.