ಜೊಯಿಡಾ: ತಾಲ್ಲೂಕಿನ ರಾಮನಗರ ತುಳಜಾಭವಾನಿ ದೇವಾಲಯದ ಸಮೀಪದಲ್ಲಿ ಸಣ್ಣನೀರಾವರಿ ಇಲಾಖೆಯಿಂದ ಅಂದಾಜು ₹2 ಕೋಟಿ ವೆಚ್ಚದಲ್ಲಿ ಸೇತುವೆ ಸಹಿತ ನಿರ್ಮಿಸಲಾಗಿರುವ ಕಿಂಡಿ ಅಣೆಕಟ್ಟನ್ನು ಶಾಸಕ ಆರ್ ವಿ ದೇಶಪಾಂಡೆ ಶುಕ್ರವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ರೈತರು ಇಲ್ಲಿ ನಿರ್ಮಿಸಲಾದ ಬಾಂದರದ ಉಪಯೋಗ ಪಡೆದುಕೊಳ್ಳಬೇಕು. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟನ್ನು ಕಟ್ಟಲಾಗಿದೆ. ಜೊಯಿಡಾ ತಾಲೂಕಿನಲ್ಲಿ ಈ ಹಿಂದೆ ಏನಿತ್ತು ಎಂಬುದನ್ನು ಜನರು ಗಮನಿಸಿ ಕಳೆದ ಹತ್ತು ವರ್ಷಗಳಲ್ಲಿ ತಾಲೂಕಿನ ಚಿತ್ರಣವೇ ಬದಲಾಗಿದೆ ಎಂಬುದನ್ನು ಜನರು ಲಕ್ಷ್ಯದಲ್ಲಿ ಇಟ್ಟುಕೊಳ್ಳಬೇಕು ಎಂದರು.
ಜೊಯಿಡಾ ತಹಶಿಲ್ದಾರ್ ಮಂಜುನಾಥ ಮೊನ್ನೋಳಿ, ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಭಾರತಿ ಎಂ, ಜಿ.ಪಂ ಮಾಜಿ ಸದಸ್ಯ ಸಂಜಯ ಹಣಬರ, ಕಾಂಗ್ರೆಸ್ ಪಕ್ಷದ ಗುರುನಾಥ ಕಾಮತ್, ಅಕ್ಷಯ ರಾವಳ, ಕೃಷ್ಣಾ ದೇಸಾಯಿ, ವಿಲಾಸ ದೇಸಾಯಿ, ಮಲ್ಲಾರ ರಾಣೆ , ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ವಿರೇಶ ಬಿಜಾಪುರ, ರುದ್ರಮೂರ್ತಿ ತಳವಾರ ಮುಂತಾದವರು ಇದ್ದರು.
ಶಾಸಕರು ಜಗಲಪೇಟ್ ಪ್ರಾದೇಶಿಕ ಅರಣ್ಯ ವಲಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಲ್ಲಿನ ಸ್ಥಳೀಯರು ಕಾಡನ್ನು ಉಳಿಸಿ ಬೆಳೆಸಿದ್ದಾರೆ, ಜನರು ಅರಣ್ಯ ಇಲಾಖೆಯ ಜೊತೆಗೂಡಿ ಪರಿಸರ ಸಂರಕ್ಷಣೆ ಮಾಡುವ ಕಾರ್ಯ ಮಾಡಬೇಕು ಎಂದರು, ವಲಯ ಅರಣ್ಯಾಧಿಕಾರಿ ವಿನಯ ಭಟ್, ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳೀಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.