ಅಂಕೋಲಾ: ಎರಡು ದಿನಗಳಿಂದ ಸುರಿದ ಅಕಾಲಿಕ ಮಳೆಗೆ ತಾಲ್ಲೂಕಿನಾದ್ಯಂತ ರಸ್ತೆಗಳು ಜಾಲಾವೃತಗೊಂಡು ಸಂಚಾರಕ್ಕೆ ಅಡ್ಡಿಯಾಗಿ ಜನ ಜೀವನ ಅಸ್ತವ್ಯಸ್ತಗೊಂಡಿತು.
ಚತುಷ್ಪಥ ಹೆದ್ದಾರಿ ಕಾಮಗಾರಿ ತಾಲ್ಲೂಕಿನ ಕೆಲವಡೆ ಅಪೂರ್ಣಗೊಂಡಿರುವುದರಿಂದ ಸಗಡಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳಲೆ ಗ್ರಾಮದ ಗೋಕರ್ಣದಿಂದ ಕುಮಟಾಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಜಾಲಾವೃತಗೊಂಡು ಪ್ರಯಾಣಿಕರು ಹೈರಾಣಾಗಿದ್ದಾರೆ. ‘ಕಾಮಗಾರಿ ಗುತ್ತಿಗೆ ಪಡೆದ ಐ.ಆರ್.ಬಿ ಕಂಪನಿಯವರಿಗೆ ಸಮಸ್ಯೆ ಕುರಿತು ಹೇಳಿ ಸಾಕಾಗಿದೆ’ ಎಂದರು ಸ್ಥಳೀಯರಾದ ಗಣೇಶ್ ಗೌಡ.
ಇನ್ನೊಂದೆಡೆ ರಾಷ್ಟ್ರೀಯ ಹೆದ್ದಾರಿಯಿಂದ ಗೋಕರ್ಣಕ್ಕೆ ತೆರಳುವ ಮಾರ್ಗದ ಬದಿಯ ಚರಂಡಿಯಲ್ಲಿ ಗೋಕರ್ಣಕ್ಕೆ ಸರಬರಾಜಾಗುವ ಕುಡಿಯುವ ನೀರಿನ ಪೈಪ್ ಅನ್ನು ಚರಂಡಿಯಲ್ಲಿ ಆಳ ತೋಡದೆ ಮೇಲೆಯೇ ಹಾಕಿದ್ದರಿಂದ ಮಳೆ ನೀರು ಹೋಗಲು ಆಸ್ಪದವಿಲ್ಲದಾಗಿದೆ. ಸಮಸ್ಯೆ ಪರಿಹರಿಸದಿದ್ದರೆ ಪ್ರತಿಭಟನೆ ಕೈಗೊಳ್ಳುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.