ADVERTISEMENT

ಗೋಕರ್ಣ | ವಾಹನದ ಕಿಟಕಿಯಲ್ಲೇ ಗೃಹರಕ್ಷಕನ ಎಳೆದೊಯ್ದು ಪ್ರವಾಸಿಗರ ದರ್ಪ

ಏಕಮುಖ ರಸ್ತೆಯಲ್ಲಿ ವಾಹನ ಚಲಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 27 ಜುಲೈ 2019, 15:07 IST
Last Updated 27 ಜುಲೈ 2019, 15:07 IST
ಗೋಕರ್ಣದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯನ್ನು ತವೆರಾ ವಾಹನದ ಕಿಟಕಿಯಲ್ಲಿ ಸಿಕ್ಕಿಸಿಕೊಂಡು ಎಳೆದುಕೊಂಡು ಹೋಗುತ್ತಿರುವುದು
ಗೋಕರ್ಣದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯನ್ನು ತವೆರಾ ವಾಹನದ ಕಿಟಕಿಯಲ್ಲಿ ಸಿಕ್ಕಿಸಿಕೊಂಡು ಎಳೆದುಕೊಂಡು ಹೋಗುತ್ತಿರುವುದು   

ಗೋಕರ್ಣ: ಸಂಚಾರ ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ ಗೃಹರಕ್ಷಕ ದಳದ ಕರ್ತವ್ಯನಿರತ ಸಿಬ್ಬಂದಿಯನ್ನು, ಪ್ರವಾಸಿಗರು ತವೆರಾ ವಾಹನದ ಕಿಟಕಿಯಲ್ಲಿ ಸಿಕ್ಕಿಸಿಕೊಂಡು ಎಳೆದೊಯ್ದಿದ್ದಾರೆ. ಸುಮಾರು 300 ಮೀಟರ್‌ವರೆಗೆ ಎಳೆದುಕೊಂಡು ಹೋಗಿ ಕೆಳಕ್ಕೆ ದೂಡಡಿದ್ದಾರೆ.

ಶುಕ್ರವಾರ ಆಗಿರುವ ಈ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಸಿಕ್ಕಿದೆ. ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನಾಲ್ವರು ಪ್ರವಾಸಿಗರಿದ್ದ ವಾಹನವನ್ನುಇಲ್ಲಿನ ಕಡಲತೀರದಿಂದ ಏಕಮುಖ ಸಂಚಾರದ ರಸ್ತೆಯಲ್ಲಿ ಚಲಾಯಿಸಿಕೊಂಡು ಬರಲಾಗಿತ್ತು. ಗೃಹರಕ್ಷಕ ಸಿಬ್ಬಂದಿ ಚಿದಾನಂದ ಶಾನಭಾಗ್ವಾಹನವನ್ನು ತಡೆದು ರಸ್ತೆ ನಿಯಮ ಉಲ್ಲಂಘನೆಯ ಬಗ್ಗೆ ಪ್ರಶ್ನಿಸಿದ್ದಾರೆ. ಅಷ್ಟಕ್ಕೇ ಪ್ರವಾಸಿಗರು, ಅವರನ್ನು ಕಿಟಕಿಯಲ್ಲಿ ಎಳೆದುಕೊಂಡು,ವಾಹನವನ್ನುವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ.

ADVERTISEMENT

ಚಿದಾನಂದ ವಾಹನದಲ್ಲಿ ನೇತಾಡುತ್ತಲೇ ಸಾಗುತ್ತಿರುವ ದೃಶ್ಯ ಸಮೀಪದ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರವಾಸಿಗರ ಈ ದರ್ಪಕ್ಕೆ ನೆಟ್ಟಿಗರುತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿದಾನಂದ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಾಹನಚಲಿಸಿರುವಮಾರ್ಗದಲ್ಲಿನಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನುಪರಿಶೀಲಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.