ಸಾವು (ಪ್ರಾತಿನಿಧಿಕ ಚಿತ್ರ)
ಹೊನ್ನಾವರ: ತಾಲ್ಲೂಕಿನ ಕಡತೋಕ ಹೆಬ್ಳೆಕೇರಿಯ ತೋಟವೊಂದರಲ್ಲಿ ಮಂಗಳವಾರ ತೆಂಗಿನಮರದಿಂದ ಬಿದ್ದು ಕೂಲಿಕಾರರೋರ್ವರು ಮೃತಪಟ್ಟಿದ್ದಾರೆ.
ಕೆಕ್ಕಾರ ಹೂಜಿಮುರಿ ನಿವಾಸಿ ಮಂಜುನಾಥ ನಾರಾಯಣ ಮುಕ್ರಿ (46) ಮೃತರು.
'ಹೆಬ್ಳೆಕೇರಿಯ ಮಂಜುನಾಥ ರಾಮಕೃಷ್ಣ ಭಟ್ಟ ಅವರ ತೋಟದಲ್ಲಿ ಬಾಗಿದ ತೆಂಗಿನಮರವನ್ನು ನೇರ ಮಾಡುವ ಕೆಲಸ ಮಾಡುತ್ತಿರುವಾಗ ಮಂಜುನಾಥಮುಕ್ರಿ ಕೆಳಗೆ ಬಿದ್ದು ಗಾಯಗೊಂಡರು. ತೀವ್ರ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸುವ ಮೊದಲೇ ಅವರು ಮೃತಪಟ್ಟರು' ಎಂದು ಇಲ್ಲಿನ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.