ADVERTISEMENT

ದನ ಕಾಯಲು ಹೋದವರ ಮೇಲೆ ಕರಡಿಗಳ ದಾಳಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 13:23 IST
Last Updated 17 ಸೆಪ್ಟೆಂಬರ್ 2019, 13:23 IST
ಜೊಯಿಡಾ ತಾಲ್ಲೂಕಿನ ಕರಂಜೆ ಗ್ರಾಮದಲ್ಲಿ ಮಂಗಳವಾರ ಕರಡಿಗಳ ದಾಳಿಯಿಂದ ಗಾಯಗೊಂಡ ಶಿವಾಜಿ ಸುಪೂಲೋ ದೇಸಾಯಿ ಅವರನ್ನು ಪರಿಚಯಸ್ಥರು ಆರೈಕೆ ಮಾಡಿದರು
ಜೊಯಿಡಾ ತಾಲ್ಲೂಕಿನ ಕರಂಜೆ ಗ್ರಾಮದಲ್ಲಿ ಮಂಗಳವಾರ ಕರಡಿಗಳ ದಾಳಿಯಿಂದ ಗಾಯಗೊಂಡ ಶಿವಾಜಿ ಸುಪೂಲೋ ದೇಸಾಯಿ ಅವರನ್ನು ಪರಿಚಯಸ್ಥರು ಆರೈಕೆ ಮಾಡಿದರು   

ಜೊಯಿಡಾ: ತಾಲ್ಲೂಕಿನ ಕರಂಜೆ ಗ್ರಾಮದಲ್ಲಿ ಮಂಗಳವಾರ ದನ ಕಾಯಲು ಹೋದ ವ್ಯಕ್ತಿಯ ಮೇಲೆ ಎರಡು ಕರಡಿಗಳು ದಾಳಿ ನಡೆಸಿ ತೀವ್ರ ಸ್ವರೂಪದಲ್ಲಿ ಗಾಯಗೊಳಿಸಿವೆ.

ಬಜಾರಕುಣಂಗ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕರಂಜೆಯ ಶಿವಾಜಿ ಸುಪೂಲೋ ದೇಸಾಯಿ(48)ಗಾಯಗೊಂಡವರು. ಊರಿನಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಹೋಗುತ್ತಿದ್ದಾಗ ಎದುರಾದ ಎರಡು ಕರಡಿಗಳು ಏಕಾಏಕಿ ದಾಳಿ ಮಾಡಿದವು. ಅವರ ಕಾಲು, ಕೈ ಹಾಗೂ ತಲೆಗೆ ಪೆಟ್ಟಾಗಿದೆ.

ಕರಡಿಗಳ ಕೂಗು ಮತ್ತುಶಿವಾಜಿಅವರ ಚೀರಾಟ ಕೇಳಿದ ಜನರು ಓಡಿ ಬಂದು ರಕ್ಷಿಸಿದರು. ನಂತರ ಆಂಬುಲೆನ್ಸ್‌ನಲ್ಲಿ ರಾಮನಗರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ,ಬಳಿಕ ವೈದ್ಯರ ಸಲಹೆಯಂತೆ ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಗೆ ರವಾನಿಸಲಾಯಿತು.

ADVERTISEMENT

ತಾಲ್ಲೂಕಿನಲ್ಲಿ ಎರಡು ದಿನಗಳಲ್ಲಿ ನಡೆದ ಎರಡನೇ ಕರಡಿ ದಾಳಿ ಪ್ರಕರಣ ಇದಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದಕುಂಬಾರವಾಡದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಶಿವಾನಂದ ತೋಡ್ಕರ, ಗಾಯಾಳುವಿನ ವೈದ್ಯಕೀಯ ಖರ್ಚನ್ನುಅರಣ್ಯ ಇಲಾಖೆಯಿಂದ ಭರಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.