ADVERTISEMENT

ಹೊನ್ನಾವರ | ನಿರಂತರ ಮಳೆ: ಎರಡು ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 22 ಮೇ 2025, 13:16 IST
Last Updated 22 ಮೇ 2025, 13:16 IST
ಹೊನ್ನಾವರ ತಾಲ್ಲೂಕಿನ ಕುದ್ರಿಗಿಯಲ್ಲಿ ಬುಧವಾರ ಸುರಿದ ಮಳೆಯಿಂದ ಸುಕ್ರಿ ಹಳ್ಳೇರ ಅವರ ಮನೆ ಕುಸಿದು ಬಿದ್ದಿದೆ
ಹೊನ್ನಾವರ ತಾಲ್ಲೂಕಿನ ಕುದ್ರಿಗಿಯಲ್ಲಿ ಬುಧವಾರ ಸುರಿದ ಮಳೆಯಿಂದ ಸುಕ್ರಿ ಹಳ್ಳೇರ ಅವರ ಮನೆ ಕುಸಿದು ಬಿದ್ದಿದೆ   

ಹೊನ್ನಾವರ: ತಾಲ್ಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಮಳೆಯ ಪ್ರಮಾಣ ಗುರುವಾರ ಇಳಿಮುಖವಾಗಿದೆ.

ಮಳೆಯಿಂದ ಕೃಷಿ ಚಟುವಟಿಕೆ ಚುರುಕುಗೊಂಡಿರುವುದು ಒಂದೆಡೆಯಾದರೆ ಇನ್ನೊಂದೆಡೆ ಸಾರ್ವಜನಿಕರ ಆಸ್ತಿ ಹಾನಿಯೂ ಸಂಭವಿಸಿದೆ.

‘ಬುಧವಾರ ವಂದೂರಿನ ಮಹಾಬಲೇಶ್ವರ ವೆಂಕಟರಮಣ ಹೆಗಡೆ ಅವರ ಮನೆ ಮೇಲೆ ತೆಂಗಿನಮರ ಮುರಿದು ಬಿದ್ದಿದೆ ಹಾಗೂ ಸಂಶಿ ಕುದ್ರಗಿಯ ಸುಕ್ರಿ ಸಾಂತ ಹಳ್ಳೇರ ಅವರ ಮನೆ ಕುಸಿದು ಹಾನಿ ಸಂಭವಿಸಿದೆ’ ಎಂದು ಸ್ಥಳಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಿರುವ ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.