ADVERTISEMENT

ಚಿನ್ನ ಗೆದ್ದ ಪ್ರೇರಣಾಗೆ ₹2 ಲಕ್ಷ ಬಹುಮಾನ: ಕಾಗೇರಿ

​ಪ್ರಜಾವಾಣಿ ವಾರ್ತೆ
Published 23 ಮೇ 2022, 13:38 IST
Last Updated 23 ಮೇ 2022, 13:38 IST
   

ಶಿರಸಿ: ಫ್ರಾನ್ಸ್ ದೇಶದ ನಾರ್ಮುಂಡಿಯಲ್ಲಿ ನಡೆದ ಇಂಟರನ್ಯಾಶನಲ್ ಸ್ಕೂಲ್ ಫೆಡರೇಶನ್ ಗೇಮ್ಸ್‌ನ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಶಿರಸಿಯ ಪ್ರೇರಣಾ ಶೇಟ್‌ಗೆ ರಾಜ್ಯ ಸರ್ಕಾರ ₹ 2 ಲಕ್ಷ ಬಹುಮಾನ ನೀಡಲಿದೆ ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಘೋಷಿಸಿದರು.

ನಗರದ ಲಯನ್ಸ್ ಶಾಲೆಯಲ್ಲಿ ಸೋಮವಾರ ಪ್ರೇರಣಾಗೆ ಸನ್ಮಾನ ನೆರವೇರಿಸಿ ಮಾತನಾಡಿದ ಅವರು, 'ಕೇಂದ್ರ ಸರ್ಕಾರದ ಅಮೃತ ಕ್ರೀಡಾ ದತ್ತು ಯೋಜನೆ ಅಡಿಯಲ್ಲಿ ದೇಶದ 75 ಕ್ರೀಡಾಪಟುಗಳ ಪೈಕಿ ಪ್ರೇರಣಾಳನ್ನು ಆಯ್ಕೆ ಮಾಡಲು ಪ್ರಯತ್ನಿಸಲಾಗುವುದು' ಎಂದು ಭರವಸೆ ನೀಡಿದರು.

ಸನ್ಮಾನಕ್ಕೂ ಮೊದಲು ಅದ್ದೂರಿ‌ ಮೆರವಣಿಗೆ ಮೂಲಕ ಪ್ರೇರಣಾ ಶೇಟ್ ಹಾಗೂ ಆಕೆಯ ಪಾಲಕರನ್ನು ಶಾಲೆಗೆ ಬರಮಾಡಿಕೊಳ್ಳಲಾಯಿತು.

ADVERTISEMENT

ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಲಯನ್ಸ್ ಕ್ಲಬ್ ಪ್ರಮುಖರಾದ ರವಿ ಹೆಗಡೆ ಹೂವಿನಮನೆ, ಉದಯ ಸ್ವಾದಿ, ಎನ್.ವಿ.ಜಿ.ಭಟ್, ಶಾಲೆಯ ಮುಖ್ಯ ಶಿಕ್ಷಕ ಶಶಾಂಕ ಹೆಗಡೆ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.