ADVERTISEMENT

ಮತ್ತಿಬ್ಬರಿಗೆ ಕೋವಿಡ್ 19 ದೃಢ

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 13:56 IST
Last Updated 7 ಜೂನ್ 2020, 13:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾರವಾರ: ಜಿಲ್ಲೆಯಲ್ಲಿ ಮತ್ತಿಬ್ಬರಿಗೆ ಕೋವಿಡ್ 19 ಭಾನುವಾರ ದೃಢಪಟ್ಟಿದೆ. ಜಿಲ್ಲೆಯಲ್ಲಿಪ್ರಸ್ತುತ 32 ಸಕ್ರಿಯ ಪ್ರಕರಣಗಳಿದ್ದು, ಎಲ್ಲರ ಆರೋಗ್ಯವೂ ಚೇತರಿಸುತ್ತಿದೆ.

ಹೊಸ ಪ್ರಕರಣಗಳಲ್ಲಿ ಒಬ್ಬರು 24 ವರ್ಷದ ಮಹಿಳೆಯಾಗಿದ್ದು, ಕತಾರ್‌ನಿಂದ ವಾಪಸಾಗಿದ್ದ ಕೋವಿಡ್ 19 ಪೀಡಿತ ಪುರುಷನ‍ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು. ಮತ್ತೊಬ್ಬ 14 ವರ್ಷದ ಬಾಲಕನಾಗಿದ್ದು, ಕೇರಳದಿಂದ ಹಳಿಯಾಳಕ್ಕೆ ವಾಪಸಾಗಿದ್ದ.

ಜಿಲ್ಲೆಯಲ್ಲಿ ಒಟ್ಟು 96 ಮಂದಿಗೆ ಕೋವಿಡ್ 19 ದೃಢಪಟ್ಟಿದ್ದು, ಈ ಪೈಕಿ ಈಗಾಗಲೇ 64 ಮಂದಿಗುಣಮುಖರಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.