ADVERTISEMENT

ಶಿರಸಿ: ಒಮ್ಮತದ ಹೋರಾಟದಿಂದ ಗೆಲುವು ಸಾಧ್ಯ

ಶಿರಸಿ ಪ್ರತ್ಯೇಕ ಜಿಲ್ಲೆ ಸಮಾಲೋಚನಾ ಸಭೆ: ವೆಂಕಟೇಶ ಹೆಗಡೆ ಹೊಸಬಾಳೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 3:11 IST
Last Updated 5 ಡಿಸೆಂಬರ್ 2025, 3:11 IST
ಶಿರಸಿಯಲ್ಲಿ ಗುರುವಾಋ ನಡೆದ ಪ್ರತ್ಯೇಕ ಜಿಲ್ಲೆ ಸಮಾಲೋಚನಾ ಸಭೆಯಲ್ಲಿ ಕೃಷ್ಣಮೂರ್ತಿ ಪನ್ನೆ ಮಾತನಾಡಿದರು
ಶಿರಸಿಯಲ್ಲಿ ಗುರುವಾಋ ನಡೆದ ಪ್ರತ್ಯೇಕ ಜಿಲ್ಲೆ ಸಮಾಲೋಚನಾ ಸಭೆಯಲ್ಲಿ ಕೃಷ್ಣಮೂರ್ತಿ ಪನ್ನೆ ಮಾತನಾಡಿದರು   

ಶಿರಸಿ: ‘ಶಿರಸಿ ಜಿಲ್ಲೆ ಘೋಷಣೆ ಅತಿ ಅವಶ್ಯಕವಾಗಿದೆ. ಜಿಲ್ಲಾ ಹೋರಾಟದ ವಿಚಾರದಲ್ಲಿ ರಾಜಕೀಯ ಬೇಡ. ರಾಜಕೀಯದ ಹೊರತಾಗಿ ಹೊರಾಟ ಮಾಡಬೇಕಿದೆ. ಪಕ್ಷಾತೀತವಾದ ಸಂಘಟನೆ ರಚನೆಯಾಗಬೇಕು. ಆ ಸಂಘಟನೆಯಲ್ಲಿ ಎಲ್ಲಾ ಪಕ್ಷಗಳ ಶಾಸಕರು, ಜನಪ್ರತಿನಿಧಿಗಳು ಇರಬೇಕು. ಚರ್ಚೆಗಳು ನಡೆಯಬೇಕು. ಜಿಲ್ಲಾ ಹೋರಾಟದ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಒಮ್ಮತದ ನಿರ್ಧಾರಕ್ಕೆ ಬರಬೇಕು. ನಾವೆಲ್ಲರೂ ಒಟ್ಟಾಗಿ ಸರ್ಕಾರದ ಗಮನಕ್ಕೆ ತರಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ವೆಂಕಟೇಶ ಹೆಗಡೆ ಹೊಸಬಾಳೆ ಹೇಳಿದರು.

ನಗರದ ನೆಮ್ಮದಿ ರಂಗಧಾಮದಲ್ಲಿ ಗುರುವಾರ ಆಯೋಜಿಸಿದ್ದ ಶಿರಸಿ ಪ್ರತ್ಯೇಕ ಜಿಲ್ಲೆಗಾಗಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಸಂಘಟಕ ಕೃಷ್ಣಮೂರ್ತಿ ಪನ್ನೆ ಪ್ರಾಸ್ತಾವಿಕ ಮಾತನಾಡಿ, ಕರ್ನಾಟಕ ಏಕೀಕರಣದ ಸಮಯದಲ್ಲೇ ಶಿರಸಿ ಜಿಲ್ಲೆಯನ್ನಾಗಿ ಮಾಡುವ ಅವಕಾಶವಿದ್ದರೂ ಘೋಷಣೆ ಮಾಡಲಿಲ್ಲ. ಶಿರಸಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡುವ ಎಲ್ಲಾ ಅರ್ಹತೆಗಳಿವೆ. ಹಲವು ಸಂಘಟನೆಗಳು ಶಿರಸಿ ಜಿಲ್ಲೆಗೆ ವಿರೋಧ ವ್ಯಕ್ತಪಡಿಸಿದ್ದರು. ಈಗಾಗಲೇ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಯಾವುದೇ ಹೊಸ ತಾಲ್ಲೂಕು ಅಥವಾ ಜಿಲ್ಲೆಯ ರಚನೆಯ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದೆ. ಶಾಸಕ ಭೀಮಣ್ಣ ನಾಯ್ಕ ಸಹ ಶಿರಸಿ ಜಿಲ್ಲಾ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಧಿವೇಶನದ ಸಂದರ್ಭದಲ್ಲಿ ಶಿರಸಿ ಜಿಲ್ಲೆಯ ಘೋಷಣೆ ಬಗ್ಗೆ ಒತ್ತಡ ಹಾಕಬೇಕಿದೆ’ ಎಂದರು.

ADVERTISEMENT

ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ, ಪ್ರಭಾಕರ ಜೋಗಳೇಕರ, ಆರ್.ವಿ.ಹೆಗಡೆ ಬಾಳೇಗದ್ದೆ, ರಾಜು ಉಗ್ರಾಣಕರ್, ಚಿದಾನಂದ ಹರಿಜನ ಮುಂಡಗೋಡ, ರವಿ ಹೆಗಡೆ ಗಡಿಹಳ್ಳಿ ಇತರರು ಪಾಲ್ಗೊಂಡಿದ್ದರು.