ADVERTISEMENT

ಉತ್ತರ ಕನ್ನಡ | ಗುಜರಿಯತ್ತ ಸಂಚಾರಿ ಶೌಚಾಲಯ..!

ರಾಜೇಂದ್ರ ಹೆಗಡೆ
Published 10 ಸೆಪ್ಟೆಂಬರ್ 2024, 4:59 IST
Last Updated 10 ಸೆಪ್ಟೆಂಬರ್ 2024, 4:59 IST
<div class="paragraphs"><p>ಶಿರಸಿಯ ವಿಕಾಸಾಶ್ರಮ ಮೈದಾನದಲ್ಲಿ ಬಿದ್ದಿರುವ ಸಂಚಾರಿ ಶೌಚಾಲಯ</p></div>

ಶಿರಸಿಯ ವಿಕಾಸಾಶ್ರಮ ಮೈದಾನದಲ್ಲಿ ಬಿದ್ದಿರುವ ಸಂಚಾರಿ ಶೌಚಾಲಯ

   

ಶಿರಸಿ: ಸಾರ್ವಜನಿಕ ಉಪಯೋಗಕ್ಕೆ ಪೂರಕವಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಗರಸಭೆ ಖರೀದಿಸಿರುವ ಮೊಬೈಲ್ ಶೌಚಾಲಯಗಳು ಸಾರ್ವಜನಿಕ ಬಳಕೆಗೂ ಸಿಗದೆ, ನಗರಾ ಡಳಿತದಿಂದ ನಿರ್ವಹಣೆಯನ್ನೂ ಕಾಣದೆ ಹಾಳಾಗುತ್ತಿದೆ. ಇದಕ್ಕೆ ಸಾರ್ವಜನಿಕರ ಆಕ್ಷೇಪ ವ್ಯಕ್ತವಾಗಿದೆ. 

ನಗರದ ಮಾರಿಕಾಂಬಾ ದೇವಿ ಜಾತ್ರೆಗೆ ಬರುವ ಲಕ್ಷಾಂತರ ಭಕ್ತರ ಅನುಕೂಲಕ್ಕೆ ನಗರದ ವಿವಿಧ ಭಾಗಗಳಲ್ಲಿ ಇಡಲು ನಗರಸಭೆ ವತಿಯಿಂದ 28ಕ್ಕೂ ಹೆಚ್ಚು ಮೊಬೈಲ್ ಶೌಚಾಲಯಗಳನ್ನು ಖರೀದಿಸಲಾಗಿತ್ತು. ಜಾತ್ರೆ ವೇಳೆ ಅವುಗಳನ್ನು ಬಳಸಿ ನಂತರದ ದಿನಗಳಲ್ಲಿ ವಿಕಾಸಾಶ್ರಮ ಮೈದಾನದಲ್ಲಿ ಒಂದೆಡೆ ರಾಶಿ ಹಾಕಲಾಗಿದೆ.

ADVERTISEMENT

ಮೇಲಿನಿಂದ ಯಾವುದೇ ರಕ್ಷಣೆಯಿಲ್ಲದ ಕಾರಣ ಬಹುತೇಕ ಎಲ್ಲ ಶೌಚಾಲಯಗಳು ನಿರ್ವಹಣೆಯಿಲ್ಲದೆ ಸೊರಗಿವೆ. 

'ನಗರಸಭೆ ಆಸ್ತಿ ಸಾರ್ವಜನಿಕರ ಕರದಲ್ಲಿ ಖರೀದಿಸಿರುವ  ಆಸ್ತಿಯಾಗಿದೆ. ತಲಾ ₹10- ₹12 ಸಾವಿರ ಮೊತ್ತ ನೀಡಿ ಖರೀದಿಸಿರುವ ಮೊಬೈಲ್ ಶೌಚಾಲಯಗಳನ್ನು ಅವುಗಳ ಬಳಕೆ ನಂತರ ವ್ಯವಸ್ಥಿತವಾಗಿ ಜೋಡಿಸಿಡುವ ಕಾರ್ಯವಾಗಿಲ್ಲ. ಮೈದಾನದ ಒಂದು ಕಡೆ ತ್ಯಾಜ್ಯ ರಾಶಿ ಹಾಕಿದಂತೆ ಇಡಲಾಗಿದೆ. ಅದಕ್ಕೆ ಜೋಡಿಸಿರುವ ಕಬ್ಬಿಣದ ಆ್ಯಂಗಲ್ ಪಟ್ಟಿಗಳು ತುಕ್ಕು ಹಿಡಿಯುತ್ತಿವೆ. ನೀರಿನ ತೊಟ್ಟಿಯಿಂದ ಸಂಪರ್ಕ ಕಲ್ಪಿಸುವ ಪೈಪ್‍ಲೈನ್‍ಗಳು ತುಂಡಾಗಿ ಬೀಳುತ್ತಿವೆ. ಬಿಸಿಲು, ಮಳೆಯ ಕಾರಣಕ್ಕೆ ಪೈಬರ್ ಹೊದಿಕೆಗಳು ಪುಡಿಗಟ್ಟುತ್ತಿದ್ದು, ನಿರ್ವಹಣೆಗೆ ಆಸಕ್ತಿ ತೋರದಿರುವುದೇ ಇದಕ್ಕೆ ಕಾರಣವಾಗಿದೆ' ಎಂಬುದು ಸಾರ್ವಜನಿಕರ ದೂರಾಗಿದೆ. 

'ನಗರದ ಹಲವೆಡೆ ಶೌಚಾ ಲಯಗಳ ಕೊರತೆಯಿದೆ. ನಗರಸಭೆ ಯಿಂದ ಆ ಕೊರತೆ ನೀಗಿಸಲು ಈವರೆಗೆ ಸಾಧ್ಯವಾಗಿಲ್ಲ. ಇರುವ ಶೌಚಾಲಯ ಗಳು ಬಳಸುವಂಥ ಸ್ಥಿತಿಯಲ್ಲಿಲ್ಲ. ಇಂಥ ಸಂದರ್ಭದಲ್ಲಿ ಎಲ್ಲ ವ್ಯವಸ್ಥೆ ಗಳನ್ನು ಹೊಂದಿರುವ ಮೊಬೈಲ್ ಶೌಚಾಲಯಗಳನ್ನು ಖರೀದಿಸಿ, ನಿರ್ವಹಣೆ ಮಾಡದೆ ಹಾಳು ಮಾಡುತ್ತಿರು ವುದು ಎಷ್ಟು ಸರಿ?' ಎಂದು ನಗರ ನಿವಾಸಿ ಯಶೋಧಾ ಗೌಡ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.