ಶಿಕ್ಷಕ
– ಗೆಟ್ಟಿ ಚಿತ್ರ
ಕಾರವಾರ: ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾಮಟ್ಟದಲ್ಲಿ ನೀಡಲಾಗುವ ಉತ್ತಮ ಶಿಕ್ಷಕ ಪ್ರಶಸ್ತಿಗೆ ಕಾರವಾರ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಗಳ 33 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.
ಎರಡೂ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಆಯ್ಕೆ ಸಮಿತಿಯು ಪ್ರತ್ಯೇಕವಾಗಿ ನಡೆಸಿದ ಸಭೆಯಲ್ಲಿ ಪ್ರಶಸ್ತಿಗೆ ಆಯ್ಕೆಗೊಂಡವರ ಹೆಸರು ಅಂತಿಮಗೊಳಿಸಲಾಯಿತು.
ಪ್ರತಿ ತಾಲ್ಲೂಕಿನಿಂದ ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳ ತಲಾ ಒಬ್ಬ ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಉತ್ತಮ ಕಾರ್ಯನಿರ್ವಹಣೆಯ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಕ್ರಿಯಾಶೀಲರಾದವರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಆಯ್ಕೆಗಾಗಿ ನೂರಾರು ಅರ್ಜಿಗಳು ಸಲ್ಲಿಕೆಯಾಗಿದ್ದವು ಎಂದು ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಕಿರಿಯ ಪ್ರಾಥಮಿಕ ವಿಭಾಗ: ನಾಗವೇಣಿ ನಾಯ್ಕ (ಹಬ್ಬುವಾಡ, ಕಾರವಾರ), ಬಾಬು ಗೌಡ (ಕಟ್ಟಿನಹಕ್ಕಲ, ಅಂಕೋಲಾ), ಉಷಾಬಾಯಿ ನಾಯ್ಕ, (ತಾರಿಬಾಗಿಲು ನಂ.2, ಕುಮಟಾ), ಸುನಂದಾ ಭಟ್ಟ, (ಅನಂತವಾಡಿ, ಹೊನ್ನಾವರ), ಸುಮನಾ ಕೆ. (ಹಡಾಳ, ಭಟ್ಕಳ).
ಹಿರಿಯ ಪ್ರಾಥಮಿಕ ವಿಭಾಗ: ಮಾಲಿನಿ ನಾಯಕ (ಕಾರವಾರ), ಸಾವಿತ್ರಿ ನಾಯಕ (ಅಂಕೋಲಾ), ಶ್ಯಾಮಲಾ ಹೆಗಡೆ (ಉಪ್ಪಿನಪಟ್ಟಣ, ಕುಮಟಾ), ಗಣಪಯ್ಯ ಗೌಡ (ಅಪ್ಸರಕೊಂಡ, ಹೊನ್ನಾವರ), ವಾಸು ನಾಯ್ಕ (ಚಾಲೆ, ಭಟ್ಕಳ).
ಪ್ರೌಢಶಾಲೆ ವಿಭಾಗ: ತಿಮ್ಮಪ್ಪ ನಾಯಕ (ಚೆಂಡಿಯಾ, ಕಾರವಾರ), ನೇಮಸಿಂಗ ರಾಠೋಡ (ಶೆಟಗೇರಿ, ಅಂಕೋಲಾ), ಚಂದ್ರಶೇಖರ ನಾಯಕ (ಗೋಕರ್ಣ, ಕುಮಟಾ), ಶ್ರೀಕಾಂತ ಹಿಟ್ನಳ್ಳಿ (ಕರ್ಕಿ, ಹೊನ್ನಾವರ), ಸುಜಾತಾ ಹೊರ್ಟಾ (ಬೈಲೂರು, ಭಟ್ಕಳ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.