ADVERTISEMENT

ಭೀಮರಾಯ, ರೇಣುಕಾ ಪ್ರಥಮ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 15:39 IST
Last Updated 3 ನವೆಂಬರ್ 2019, 15:39 IST
ರಾಜ್ಯ ಮಟ್ಟದ ಬಿಲ್ವಿದ್ಯೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಯಾದಗಿರಿಯ ಭೀಮರಾಯ ಅವರಿಗೆ ಗೋಪಾಲಕೃಷ್ಣ ವೈದ್ಯ ಬಹುಮಾನ ವಿತರಿಸಿದರು
ರಾಜ್ಯ ಮಟ್ಟದ ಬಿಲ್ವಿದ್ಯೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಯಾದಗಿರಿಯ ಭೀಮರಾಯ ಅವರಿಗೆ ಗೋಪಾಲಕೃಷ್ಣ ವೈದ್ಯ ಬಹುಮಾನ ವಿತರಿಸಿದರು   

ಶಿರಸಿ: ವನವಾಸಿ ಕಲ್ಯಾಣ ಸಂಘಟನೆ ಆಶ್ರಯದಲ್ಲಿ ಭಾನುವಾರ ತಾಲ್ಲೂಕಿನ ದೇವನಳ್ಳಿಯಲ್ಲಿ ಮುಕ್ತಾಯಗೊಂಡ ರಾಜ್ಯ ಮಟ್ಟದ ಬಿಲ್ವಿದ್ಯೆ ಸ್ಪರ್ಧೆಯಲ್ಲಿ ಯಾದಗಿರಿಯ ಭೀಮರಾಯ ಹಾಗೂ ರೇಣುಕಾ ಪ್ರಥಮ, ಕಬಡ್ಡಿಯಲ್ಲಿ ರಾಯಚೂರು ಹಾಗೂ ಹಾವೇರಿ ತಂಡ ಪ್ರಥಮ ಸ್ಥಾನ ಪಡೆದವು.

ರಾಜ್ಯದ 14 ಜಿಲ್ಲೆಗಳ 226 ಕಬಡ್ಡಿ ಆಟಗಾರರು, ಏಳು ಜಿಲ್ಲೆಗಳ 66 ಬಿಲ್ಲು ವಿದ್ಯೆ ಪ್ರವೀಣರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಬಿಲ್ಲುಗಾರಿಕೆ ಸ್ಪರ್ಧೆಯ ಬಾಲಕರ ಸಬ್ ಜ್ಯೂನಿಯರ್ ವಿಭಾಗದಲ್ಲಿ ಭೀಮರಾಯ ಯಾದಗಿರಿ ಪ್ರಥಮ, ಕೇಶವ ಆರ್.ಎಂ ಕಾರವಾರ ದ್ವಿತೀಯ, ನಾರಾಯಣ ಶಿರಸಿ ತೃತೀಯ, ಪ್ರಭು ಯಾದಗಿರಿ ಚತುರ್ಥ, ಬಾಲಕಿಯರ ವಿಭಾಗದಲ್ಲಿ ರೇಣುಕಾ ಯಾದಗಿರಿ ಪ್ರಥಮ, ನಾಗವೇಣಿ ಶಿರಸಿ ದ್ವಿತೀಯ, ಚಂದನಾ ಶಿರಸಿ ತೃತೀಯ, ರಾಜಶ್ರೀ ಶಿರಸಿ ಚತುರ್ಥ ಸ್ಥಾನ ಪಡೆದರು.

ಕಬಡ್ಡಿಯ ಸಬ್ ಜ್ಯೂನಿಯರ್ ವಿಭಾಗದಲ್ಲಿ ರಾಯಚೂರು ತಂಡ ಪ್ರಥಮ, ಹಾವೇರಿ ತಂಡ ದ್ವಿತೀಯ, ಶಿರಸಿ ತಂಡ ತೃತೀಯ, ಜ್ಯೂನಿಯರ್ ವಿಭಾಗದಲ್ಲಿ ಹಾವೇರಿ ತಂಡ ಪ್ರಥಮ, ಯಾದಗಿರಿ ತಂಡ ದ್ವಿತೀಯ, ಶಿವಮೊಗ್ಗ ತಂಡ ತೃತೀಯ ಸ್ಥಾನ ಪಡೆದವು.
ವನವಾಸಿ ಸಮುದಾಯಗಳಾದ ಸೋಲಿಗ, ಸಿದ್ದಿ, ಜೇನುಕುರುಬ, ಎರವ, ಕೊರಗ, ದನಗರಗೌಳಿ, ಕುಂಬ್ರಿಮರಾಠಿ, ವಾಲ್ಮೀಕಿ ಬೇಡ, ವಾಲ್ಮೀಕಿ ನಾಯಕ, ಹಾಲಕ್ಕಿ ಗೌಡ, ಈರುಳಿಗ ಸಮುದಾಯದ ಕ್ರೀಡಾಪಟುಗಳು ಭಾಗವಹಿಸಿದ್ದರು.

ADVERTISEMENT

ವನವಾಸಿ ಕಲ್ಯಾಣದ ಅಖಿಲ ಭಾರತ ಕ್ರೀಡಾ ಸಹಕಾರ್ಯದರ್ಶಿ ಪ್ರಭೋದನಂದ ಜಿಲ್ಲಾ ಸಹಕಾರ್ಯದರ್ಶಿ ರವೀಂದ್ರ ಯಡಳ್ಳಿ, ಪ್ರಮುಖ ಶಾಂತಾರಾಮ ಸಿದ್ದಿ, ಶ್ರೀಪಾದ ಅರಸಾಪುರ, ಜಿಲ್ಲಾ ಪಂಚಾಯ್ತಿ ಸದಸ್ಯೆ ಪ್ರಭಾವತಿ ಗೌಡ, ತಾಲ್ಲೂಕು ಪಂಚಾಯ್ತಿ ಸದಸ್ಯ ವಿನಾಯಕ ಹೆಗಡೆ, ಮುಂಡಗನಮನೆ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಸ್ಥಳೀಯ ಪ್ರಮುಖ ನಾರಾಯಣ ಮರಾಠಿ, ದೈಹಿಕ ಶಿಕ್ಷಣ ಶಿಕ್ಷಕರಾದ ಅಶೋಕ ಭಜಂತ್ರಿ, ಗೋಪಾಲಕೃಷ್ಣ ತಾಂಡೂರಾಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.