ಶಿರಸಿ ನಗರದ ನೂತನ ಕೇಂದ್ರ ಬಸ್ ನಿಲ್ದಾಣದಲ್ಲಿ ರೋಟರಿ ಕ್ಲಬ್ ವತಿಯಿಂದ ಪ್ಲಾಸ್ಟಿಕ್ ತ್ಯಾಜ್ಯ ಬಾಟಲಿಗಳ ಸಂಗ್ರಹಿಸುವ ತೊಟ್ಟಿಯನ್ನು ನಿರ್ಮಾಣ ಮಾಡಿ ಪ್ರಯಾಣಿಕರ ಬಳಕೆಗೆ ನೀಡಲಾಯಿತು
ಶಿರಸಿ: ನಗರದ ನೂತನ ಕೇಂದ್ರ ಬಸ್ ನಿಲ್ದಾಣದಲ್ಲಿ ರೋಟರಿ ಕ್ಲಬ್ ವತಿಯಿಂದ ಮಂಗಳವಾರ ಪ್ಲಾಸ್ಟಿಕ್ ತ್ಯಾಜ್ಯ ಬಾಟಲಿಗಳ ಸಂಗ್ರಹಿಸುವ ತೊಟ್ಟಿ ನಿರ್ಮಾಣ ಮಾಡಿ ಪ್ರಯಾಣಿಕರ ಬಳಕೆಗೆ ನೀಡಲಾಗಿದೆ.
ಬಾಟಲಿ ಮಾದರಿಯ ಕಬ್ಬಿಣದ ತೊಟ್ಟಿ ನಿರ್ಮಾಣ ಮಾಡಿಸಿ ಪ್ರಯಾಣಿಕರ ಸಂಖ್ಯೆ ಅಧಿಕ ಇರುವ ಬಸ್ ನಿಲ್ದಾಣದಲ್ಲಿ ಇರಿಸಲಾಗಿದೆ. ಪಾನೀಯ ಖರೀದಿ, ಬಳಸಿದ ಬಳಿಕ ಬಿಸಾಕುವ ಬಾಟಲಿಗಳನ್ನು ಒಂದಡೆಗೆ ಶೇಖರಿಸುವ ಪದ್ಧತಿಗೆ ರೋಟರಿ ನೆರವಾಗಿದೆ. ಈ ವಿಶಿಷ್ಟ ತೊಟ್ಟಿಯನ್ನು ಎನ್‍ಡಬ್ಲ್ಯುಕೆಆರ್‌ಟಿಸಿ ಅಧಿಕಾರಿ ಬಸವರಾಜ ಅಮ್ಮನವರ ಉದ್ಘಾಟಿಸಿದರು. ಈಗಾಗಲೇ ನಗರದ ದೇವಿಕೇರೆ, ಕೋಟೆಕೇರೆ ಸೇರಿದಂತೆ ಐದು ಕಡೆ ಸ್ವಚ್ಛತೆ ಅಭಿಯಾನದ ಅಂಗವಾಗಿ ಸಾಮಾಜಿಕ ಬದ್ಧತೆಯಲ್ಲಿ ರೋಟರಿ ಕ್ಲಬ್ ಇದನ್ನು ಅಳವಡಿಸಿ ಗಮನ ಸೆಳೆದಿದೆ.
ಈ ವೇಳೆ ರೋಟರಿ ಕ್ಲಬ್ ಶಿರಸಿ ಘಟಕದ ಅಧ್ಯಕ್ಷೆ ಡಾ. ಸುಮನ್ ಹೆಗಡೆ, ಪದಾಧಿಕಾರಿ ಶ್ರೀನಿವಾಸ ನಾಯ್ಕ, ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಹೋರಾಟಗಾರ ಅನಂತಮೂರ್ತಿ ಹೆಗಡೆ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಸದಸ್ಯರಾದ ಆನಂದ ಸಾಲೇರ, ವೀಣಾ ಶೆಟ್ಟಿ, ಗಣಪತಿ ನಾಯ್ಕ , ರೋಟರಿ ಸಂಪರ್ಕ ಅಧಿಕಾರಿ ರವಿ ಹೆಗಡೆ ಗಡಿಹಳ್ಳಿ, ಸಾರಿಗೆ ಅಧಿಕಾರಿ ಪ್ರವೀಣ ಶೇಟ್, ರಮೇಶ ಹೆಗಡೆ ಹಿಮಾದ್ರಿ ಸೇರಿದಂತೆ ಅನೇಕರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.