ADVERTISEMENT

ಯಲ್ಲಾಪುರ ಉಪ ಚುನಾವಣೆ ಡಿ.5ಕ್ಕೆ

ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿ: ಡಿ.9ರಂದು ಮತ ಎಣಿಕೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 12:45 IST
Last Updated 1 ಡಿಸೆಂಬರ್ 2019, 12:45 IST
ಕಾರವಾರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಮಾತನಾಡಿದರು. ಎಸ್‌.ಪಿ. ಶಿವಪ್ರಕಾಶ ದೇವರಾಜು, ಎ.ಡಿ.ಸಿ ನಾಗರಾಜ ಸಿಂಗ್ರೇರ್ ಚಿತ್ರದಲ್ಲಿದ್ದಾರೆ.
ಕಾರವಾರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಮಾತನಾಡಿದರು. ಎಸ್‌.ಪಿ. ಶಿವಪ್ರಕಾಶ ದೇವರಾಜು, ಎ.ಡಿ.ಸಿ ನಾಗರಾಜ ಸಿಂಗ್ರೇರ್ ಚಿತ್ರದಲ್ಲಿದ್ದಾರೆ.   

ಕಾರವಾರ: ‘ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮತದಾನವುಡಿ.5ರಂದು ನಡೆಯಲಿದೆ. ಈ ಸಂಬಂಧ ಜಿಲ್ಲೆಯಾದ್ಯಂತ ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ231 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು 15 ಚೆಕ್‌ಪೋಸ್ಟ್‌‌ಗಳನ್ನು ತೆರೆಯಲಾಗಿದೆ.ಈ ಬಾರಿ ಸೂಚನೆಯಿಲ್ಲದೇ ಪರಿಶೀಲನೆ ಮಾಡುವ ಪ್ರಕ್ರಿಯೆಯನ್ನು ಹೆಚ್ಚಿಸಲಾಗುವುದು’ ಎಂದು ಹೇಳಿದರು.

ಭಾವಚಿತ್ರವಿರುವ ಪಟ್ಟಿ: ಮತದಾರರ ಭಾವಚಿತ್ರವುಳ್ಳ ಪಟ್ಟಿಯನ್ನೇ ಉಪಚುನಾವಣೆಗೂಬಳಸಲಾಗುತ್ತದೆ.ಮತದಾರರು ಚುನಾವಣಾ ಆಯೋಗ ನೀಡಿರುವ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಇದನ್ನೇಮತದಾನ ಮಾಡಲುಮುಖ್ಯ ದಾಖಲೆಎಂದು ಪರಿಗಣಿಸಲಾಗುತ್ತದೆ. ಪರ್ಯಾಯ ದಾಖಲೆಗಳ ಬಗ್ಗೆ ಆಯೋಗದ ಸೂಚನೆಯ ಅನ್ವಯ ಮತದಾನದ ಸಮಯದಲ್ಲಿ ನಿರ್ಧರಿಸಲಾಗುತ್ತದೆ ಎಂದರು.

ADVERTISEMENT

ಮತದಾನಕ್ಕೆ ಅಗತ್ಯವಿರುವ ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿ.ವಿ.ಪ್ಯಾಟ್ ಯಂತ್ರಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇವುಗಳನ್ನು ಬಳಸಿ ಯಾವುದೇ ಗೊಂದಲವಿಲ್ಲದೇ ಮತದಾನ ಪ್ರಕ್ರಿಯೆ ಮುಕ್ತಾಯಗೊಳಿಸುವುದು ಆಯೋಗದ ಉದ್ದೇಶವಾಗಿದೆ ಎಂದು ತಿಳಿಸಿದರು.

ಮುನ್ನೆಚ್ಚರಿಕಾ ಕ್ರಮಗಳು:ಯಲ್ಲಾಪುರದಲ್ಲಿ ಚುನಾವಣಾಧಿಕಾರಿ ಕಚೇರಿಯಿಂದ 200 ಮೀಟರ್ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮತದಾನದ ಹಿಂದಿನ ದಿನ, ಮತದಾನದ ದಿನ, ಮತ ಎಣಿಕೆಯ ಹಿಂದಿನ ದಿನ ಹಾಗೂ ಮತ ಎಣಿಕೆಯ ದಿನಗಳಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು. ಮತದಾನದ ದಿನ ಸ್ಥಳೀಯವಾಗಿ ರಜೆ ಘೋಷಿಸಲಾಗುವುದು ಎಂದು ಅವರು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾತನಾಡಿ, ‘ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಅಲ್ಲಿರುವ ರೌಡಿ ಶೀಟರ್‌ಗಳ ಮೇಲೂ ಕಣ್ಣಿಡಲಾಗಿದೆ. ಅನುಮತಿಯಿಲ್ಲದೇ ಬಂಟಿಂಗ್, ಬ್ಯಾನರ್‌ಗಳನ್ನು ಕಟ್ಟಿದರೆ ತೆರವು ಮಾಡಿ ದೂರು ದಾಖಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ ಉಪಸ್ಥಿತರಿದ್ದರು.

ಮತದಾರರು

ಪುರುಷರು– 87,899

ಮಹಿಳೆಯರು–84,647

ಇತರ –1

ಒಟ್ಟು –1,72,547

*******

ಯಲ್ಲಾಪುರ: ಉಪ ಚುನಾವಣೆ

ಏನು ಯಾವಾಗ ವಾರ

ನಾಮಪತ್ರ ಸಲ್ಲಿಕೆ ಆರಂಭ ನ.11 ಸೋಮವಾರ

ನಾಮಪತ್ರ ಸಲ್ಲಿಕೆಗೆ ಕೊನೆ ದಿನ ನ.18 ಸೋಮವಾರ

ನಾಮಪತ್ರ ಪರಿಶೀಲನೆ ನ.19 ಮಂಗಳವಾರ

ಹಿಂಪಡೆಯಲು ಕೊನೆ ದಿನ ನ.21 ಗುರುವಾರ

ಚುನಾವಣೆ ಡಿ.5 ಗುರುವಾರ

ಮತ ಎಣಿಕೆ ಡಿ.9 ಸೋಮವಾರ

ಚುನಾವಣಾ ಪ್ರಕ್ರಿಯೆ ಮುಕ್ತಾಯ ಡಿ.11 ಬುಧವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.