ಯಲ್ಲಾಪುರ: ‘ಯೋಗಾಭ್ಯಾಸ ನಿರಂತರವಾಗಿ ನಡೆಯಬೇಕು. ಯಲ್ಲಾಪುರದ ಪ್ರತಿ ಗ್ರಾಮಕ್ಕೆ ಯೋಗ ತಲುಪಬೇಕು’ ಎಂದು ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು.
ಪಟ್ಟಣದ ವಿಶ್ವದರ್ಶನ ಆವಾರದಲ್ಲಿ ಭಾನುವಾರ ಪತಂಜಲಿ ಯೋಗಪೀಠ ಹರಿದ್ವಾರ ಕೊಡಮಾಡಿದ ರಾಜ್ಯಮಟ್ಟದ ಸಮಾಜಸೇವಾರತ್ನ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು.
ಪತಂಜಲಿ ಸಮಿತಿಯ ಉತ್ತರ ಕರ್ನಾಟಕ ಪ್ರಭಾರಿಗ ಕಿರಣ ಮನ್ಹೋಳ್ಕರ್ ಅಗ್ನಿಹೋತ್ರ ಹೋಮ ನಡೆಸಿ, ‘ಯೋಗವೆಂಬ ಯಜ್ಞದಲ್ಲಿ ಸದಾ ನಿರತರಾಗೋಣ ನಿತ್ಯವೂ ನಕಾರಾತ್ಮಕ ವಾತಾವರಣ ತೊಲಗಿಸಲು ಅಗ್ನಿಹೋತ್ರ ಮಾಡೋಣ’ ಎಂದರು.
ಹಿರಿಯರಾದ ಅನುಸೂಯಾ ಮುದ್ದೇಪಾಲ್ ಮಾತನಾಡಿ, ‘ಯೋಗಕ್ಕೆ ಅಸಾಧ್ಯವಾದದ್ದನ್ನು ಸಾಧ್ಯವಾಗಿಸುವ ಶಕ್ತಿ ಇದೆ’ ಎಂದರು.
ಪತಂಜಲಿಯ ಯೋಗ ಸಮಿತಿ ಕರ್ನಾಟಕ ರಾಜ್ಯ ಕೃಷಿ ಪ್ರಭಾರಿ ಸಂಜಯ ಕುಸ್ತಿಗಾರ ಯೋಗಾಭ್ಯಾಸದ ತರಬೇತಿ ನೀಡಿದರು. ಪತಂಜಲಿಯ ತಾಲ್ಲೂಕು ಸಮಿತಿ ಅಧ್ಯಕ್ಷ ವಿ.ಕೆ.ಭಟ್ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ ಭಟ್ಟ, ಪ್ರೇಮಾ ಗಾಂವ್ಕರ್, ಅಪರ್ಣಾ ಭಟ್ಟ, ರಾಘವೇಂದ್ರ ಪಟಗಾರ, ವಿಶ್ವಾಸ ಯೋಗ ಕುರಿತ ತಮ್ಮ ಅನಿಸಿಕೆಗಳ ಹಂಚಿಕೊಂಡರು.
ಪತಂಜಲಿ ಯೋಗ ಸಮಿತಿಯ ರಾಜ್ಯ ಅಡ್ವಾನ್ಸ್ ಯೋಗ ಶಿಬಿರದ ಸಂಯೋಜ ಬಾಲಕೃಷ್ಣ ಕೋಳೆಕರ, ಜಿಲ್ಲಾ ಕಾರ್ಯದರ್ಶಿ ನಾಗೇಂದ್ರ ಭಟ್ ಗೋಕರ್ಣ, ಜಿಲ್ಲಾ ಪ್ರಭಾರಿ ರಘುರಾಮ ಹೆಗಡೆ, ಹುಬ್ಬಳ್ಳಿಯ ಕೇಂದ್ರ ಕಚೇರಿಯ ಮುಖ್ಯಸ್ಥ ದೇವೇಂದ್ರ, ಅಡಿಕೆ ವರ್ತಕರ ಸಂಘದ ಅಧ್ಯಕ್ಷ ರವಿ ಹೆಗಡೆ, ಯೋಗ ಸಮಿತಿ ತಾಲ್ಲೂಕು ಮಹಿಳಾ ಪ್ರಭಾರಿ ಶೈಲಾ ಭಟ್ಟ, ಸುಬ್ರಾಯ್ ಭಟ್ ಆನೇಜಡ್ಡಿ, ಆಶಾ ಬಗನಗದ್ದೆ, ನಾಗರತ್ನ ನರಸಿಂಹಮೂರ್ತಿ ಭಟ್ಟ, ಸಂಧ್ಯಾ ಹೆಗಡೆ, ಸಿಂಚನಾ ಶಿವಪ್ರಸಾದ ಭಟ್ಟ, ಎನ್.ವಿ. ಸಭಾಹಿತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.