ADVERTISEMENT

ಜರ್ಮನಿ ಪ್ರವಾಸಿಗರಿಗೆ ಮರು ಪ್ರಯಾಣಕ್ಕೆ ವಿಮಾನ

ಗೋಕರ್ಣದಿಂದ ಬೆಂಗಳೂರಿಗೆ ಕಳುಹಿಸಿಕೊಡಲು ವ್ಯವಸ್ಥೆ: ರೋಶನ್

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 16:16 IST
Last Updated 26 ಮಾರ್ಚ್ 2020, 16:16 IST
ಗೋಕರ್ಣದ ಪೊಲೀಸ್ ಸ್ಟೇಶನ್ ಹೊರಗಡೆ ಕುಳಿತಿರುವ ಜರ್ಮನಿ ಪ್ರವಾಸಿಗರು
ಗೋಕರ್ಣದ ಪೊಲೀಸ್ ಸ್ಟೇಶನ್ ಹೊರಗಡೆ ಕುಳಿತಿರುವ ಜರ್ಮನಿ ಪ್ರವಾಸಿಗರು   

ಗೋಕರ್ಣ: ‘ರಾಜ್ಯದಲ್ಲಿರುವ ಜರ್ಮನಿ ದೇಶದ ಪ್ರಜೆಗಳಿಗಾಗಿ ಸರ್ಕಾರವುಬೆಂಗಳೂರಿನಿಂದ ಫ್ರಾಂಕ್‌ಫರ್ಟ್‌ಗೆ ವಿಶೇಷ ವಿಮಾನವನ್ನು ವ್ಯವಸ್ಥೆ ಮಾಡಿದೆ.ಗೋಕರ್ಣದಿಂದಹೋಗಲು ಬಯಸುವ ಆ ದೇಶದ ಪ್ರಜೆಗಳನ್ನುಬೆಂಗಳೂರಿಗೆ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿಮೊಹಮ್ಮದ್ರೋಶನ್ ತಿಳಿಸಿದ್ದಾರೆ.

ಗ್ರಾಮಕ್ಕೆ ಪ್ರವಾಸ ಬಂದಿರುವ ಜರ್ಮನ್ ಪ್ರವಾಸಿಗರೊಂದಿಗೆಗುರುವಾರ ಸಂಜೆ ಇಲ್ಲಿನ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಸಭೆ ನಡೆದಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ವೀಸಾ ಮುಗಿದವರು ಅಥವಾ ಅವಧಿಮುಗಿಯುವ ಮೊದಲೇ ಜರ್ಮನಿಗೆ ಹೋಗಲು ಬಯಸುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಅಂತವರ ಪಟ್ಟಿ ಮಾಡಿ ಅನುಕೂಲಕ್ಕೆ ಸರಿಯಾಗಿ ವಾಹನದ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದಲೇ ಮಾಡಲಾಗುತ್ತದೆ’ಎಂದು ಮಾಹಿತಿ ನೀಡಿದರು.

ಜರ್ಮನ್ ರಾಯಭಾರಿ ಕಚೇರಿಯು ತನ್ನ ದೇಶದ ಪ್ರಜೆಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಸಂಬಂಧ ಸ್ಪಂದಿಸಿದ ಸರ್ಕಾರವು ವಿಶೇಷ ವಿಮಾನದ ವ್ಯವಸ್ಥೆ ಮಾಡಿದೆ.

ADVERTISEMENT

‘ಕೆಲವು ಪ್ರವಾಸಿಗರು ಸಮಯ ಬಹಳ ಕಡಿಮೆಯಿದೆ, ಶುಕ್ರವಾರವೇ ವಿಮಾನದ ವ್ಯವಸ್ಥೆಯಾಗಿದೆ ಎಂದು ಹೇಳುತ್ತಿದ್ದೀರಿ. ನೀವು ಈಗ ಹೇಳಿದರೆ ಒಂದೆರಡು ಗಂಟೆಯಲ್ಲಿ ನಮಗೆ ಹೊರಡಲು ಸಾಧ್ಯವಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ರೋಶನ್,‘ವೀಸಾ ಅವಧಿಮುಗಿಯದೇ ನಮ್ಮ ಜಿಲ್ಲೆಯಲ್ಲಿಯೇ ಇರಲು ಬಯಸುವವರಿಗೆ ಎಲ್ಲ ಅನುಕೂಲತೆಯನ್ನೂ ಮಾಡಿಕೊಡಲಾಗುವುದು. ಅವರಿಗೆ ಬೇಕಾದರೆ ವೈದ್ಯಕೀಯ ಉಪಚಾರವನ್ನೂವ್ಯವಸ್ಥೆ ಮಾಡಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾಡಳಿತ ಒಟ್ಟು 33 ಜರ್ಮನ್ ಪ್ರವಾಸಿಗರನ್ನು ಗೋಕರ್ಣದಲ್ಲಿ ಗುರುತಿಸಿದೆ.ಎಷ್ಟು ಜನ ಹೋಗಲು ಬಯಸಿದ್ದಾರೆ ಎಂಬುದು ತಿಳಿಯಬೇಕಾಗಿದೆ. ಕೆಲವು ಪ್ರವಾಸಿಗರು ಜರ್ಮನ್ ರಾಯಭಾರಿ ಕಚೇರಿಯಿಂದ ಯಾವುದೇ ಮಾಹಿತಿ ಇಲ್ಲ. ಏನು ಮಾಡಬೇಕೆಂದುತಿಳಿಯುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಫ್ರಾನ್ಸ್ ರಾಯಭಾರಿ ಕಚೇರಿಯವರೂ ನಮ್ಮನ್ನು ಸಂಪರ್ಕಿಸಿದ್ದಾರೆ. ಆ ದೇಶದ ಪ್ರಜೆಗಳಿಗೂ ಹೋಗುವ ವ್ಯವಸ್ಥೆ ಮಾಡಲಾಗುವುದು ಎಂದು ರೋಶನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.