ADVERTISEMENT

ಅಂಕಸಮುದ್ರದಲ್ಲಿ ಅಪರೂಪದ ಪಕ್ಷಿಗಳ ಸಂಗಮ

ಸಿ.ಶಿವಾನಂದ
Published 27 ಸೆಪ್ಟೆಂಬರ್ 2022, 6:18 IST
Last Updated 27 ಸೆಪ್ಟೆಂಬರ್ 2022, 6:18 IST
ಅಂಕಸಮುದ್ರ ಪಕ್ಷಿಧಾಮದಲ್ಲಿ ನೀರುಕಾಗೆಗಳು (ಕಾರ್ಮೋರೆಂಟ್)
ಅಂಕಸಮುದ್ರ ಪಕ್ಷಿಧಾಮದಲ್ಲಿ ನೀರುಕಾಗೆಗಳು (ಕಾರ್ಮೋರೆಂಟ್)   

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಅಂಕಸಮುದ್ರದಲ್ಲಿ ಅಪರೂಪದ ಪಕ್ಷಿಗಳ ಸಂಗಮ ನೋಡಬಹುದು. ಕಲ್ಯಾಣ ಕರ್ನಾಟಕದ ಏಕೈಕ ಸಂರಕ್ಷಿತ ಪಕ್ಷಿಧಾಮ ಇದಾಗಿದೆ. ಪಕ್ಷಿಗಳನ್ನು ವೀಕ್ಷಿಸಲು ಪಕ್ಷಿಪ್ರೇಮಿಗಳು ಪ್ರತಿ ದಿನ ಇಲ್ಲಿಗೆ ತಂಡೋಪತಂಡವಾಗಿ ಬರುತ್ತಾರೆ.

ಪಕ್ಷಿಗಳನ್ನು ವೀಕ್ಷಿಸಲು ವೀಕ್ಷಣಾ ಗೋಪುರ ನಿರ್ಮಿಸಲಾಗಿದೆ. ಬೈನಾಕುಲಾರ್ ವ್ಯವಸ್ಥೆ ಮಾಡಲಾಗುತ್ತದೆ. ಪ್ರವಾಸಿಗರಿಗೆ ವಿಶ್ರಾಂತಿ ಭವನ ನಿರ್ಮಿಸಲಾಗಿದೆ. ಅಂಕಸಮುದ್ರ ಕೆರೆಯ 244 ಎಕರೆ ಪ್ರದೇಶದಲ್ಲಿ ದೇಶ– ವಿದೇಶಗಳ 140ಕ್ಕೂ ಹೆಚ್ಚು ಪ್ರಭೇದಗಳ ಪಕ್ಷಿಗಳ ನೆಲೆಬೀಡಾಗಿದೆ. ಕೆಲವು ಸಂತಾನೋತ್ಪತ್ತಿಗಾಗಿಯೇ ಇಲ್ಲಿಗೆ ಬರುತ್ತವೆ. ಬಣ್ಣದ ಕೊಕ್ಕರೆ (ಪೇಂಟೆಡ್ ಸ್ಟಾರ್ಕ್), ಬೂದು ಬಕ(ಗ್ರೇ ಹೆರಾನ್), ಇರಳು ಬಕ ( ನೈಟ್ ಹೆರಾನ್), ನೀರುಕಾಗೆ (ಕಾರ್ಮೋರೆಂಟ್), ಗೋವಕ್ಕಿ (ಕ್ಯಾಟಲ್ ಈಗ್ರೇಟ್), ಹೆಜ್ಜಾರ್ಲೆ (ಪೆಲಿಕಾನ್ಸ್), ಕಬ್ಬಕ್ಕಿಗಳು, ಕೊಕ್ಕರೆ, ವಿವಿಧ ಜಾತಿಯ ಬಾತುಕೋಳಿಗಳು ಸೇರಿದಂತೆ ನೂರಾರು ಪ್ರಭೇದಗಳ ಹಕ್ಕಿಗಳು ಸಾವಿರಾರು ಸಂಖ್ಯೆಯಲ್ಲಿ ಇಲ್ಲಿ ಬದುಕು ಕಂಡುಕೊಂಡಿವೆ.

ತುಂಗಭದ್ರಾ ಹಿನ್ನೀರು ಪ್ರದೇಶದ ಪಕ್ಕದ ಬಂಡೆಯಲ್ಲಿ ಒಡಮೂಡಿರುವ ತಾಲ್ಲೂಕಿನ ತಂಬ್ರಹಳ್ಳಿಯ ಬಂಡೆ ರಂಗನಾಥ ಸ್ವಾಮಿ, ಈ ದೇವಾಸ್ಥಾನದ ನಿರ್ಮಾಣಕ್ಕೆ ತನ್ನದೇ ಆದ ಇತಿಹಾಸವಿದೆ. ಬಿರುಬೇಸಿಗೆಯಲ್ಲೂ ತಂಗಾಳಿ ಸೂಸುವ ಮಂಟಪವಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.