ಹರಪನಹಳ್ಳಿ: ತಾಲ್ಲೂಕಿನ ಅರಸೀಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಬುಧವಾರ ಜರುಗಿದ ಶಾಲಾ ದಾಖಲಾತಿ ಆಂದೋಲನ ಜಾಥಾ ಜನರಲ್ಲಿ ಅರಿವು ಮೂಡಿಸಿತು.
ಸಂಪನ್ಮೂಲ ಶಿಕ್ಷಕ ವಾಗೀಶ್ ಮಾತನಾಡಿ, ‘ಸರ್ಕಾರಿ ಶಾಲೆಗಳ ಅಳಿವು, ಉಳಿವಿನ ಪ್ರಶ್ನೆ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಸರ್ಕಾರ ಕಲ್ಪಿಸುವ ಸವಲತ್ತು ಸದ್ಭಳಕೆ ಮಾಡಿಕೊಂಡು, ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕು’ ಎಂದರು.
ಮುಖಂಡರಾದ ಐ.ಸಲಾಂ ಸಾಹೇಬ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಂಜಿನಪ್ಪ ಮಾತನಾಡಿದರು.
ಅರಸೀಕೆರೆ, ಯರಬಳ್ಳಿ, ತೌಡೂರು ತಾಂಡ, ನೆಲಗೊಂಡನಹಳ್ಳಿ, ತೌಡೂರು, ಕೋಣನಕಟ್ಟೆ, ಕೆರೆಗುಡಿಹಳ್ಳಿಯಲ್ಲಿ ವಾಹನ ಸಂಚರಿಸಿತು.
ಸಿಆರ್‌ಪಿ ಸಿದ್ದೇಶ್ವರ, ಮುಖ್ಯ ಶಿಕ್ಷಕ ಮಾಲತೇಶ್ ಪಾಟೀಲ್, ಎಸ್‍ಡಿಎಂಸಿ ಅಧ್ಯಕ್ಷ ಕೆ.ರಂಗಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಹಾಲಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.