ADVERTISEMENT

ಹತ್ಯೆಗೆ ರಾಜಸ್ತಾನ ಸರ್ಕಾರದ ವೈಫಲ್ಯವೇ ಕಾರಣ: ಅನಂತ ಪದ್ಮನಾಭ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 12:55 IST
Last Updated 1 ಜುಲೈ 2022, 12:55 IST
ಜಿಲ್ಲಾ ಬಿಜೆಪಿ ವಕ್ತಾರ ಅನಂತ ಪದ್ಮನಾಭ ಸ್ವಾಮಿ
ಜಿಲ್ಲಾ ಬಿಜೆಪಿ ವಕ್ತಾರ ಅನಂತ ಪದ್ಮನಾಭ ಸ್ವಾಮಿ   

ಹೊಸಪೇಟೆ: ‘ಉದಯಪುರದಲ್ಲಿ ನಡೆದ ಕನ್ಹಯ್ಯ ಲಾಲ್ ಹತ್ಯೆಗೆ ರಾಜಸ್ತಾನದ ಕಾಂಗ್ರೆಸ್‌ ಸರ್ಕಾರದ ವೈಫಲ್ಯವೇ ಕಾರಣ’ ಎಂದು ಜಿಲ್ಲಾ ಬಿಜೆಪಿ ವಕ್ತಾರ ಅನಂತ ಪದ್ಮನಾಭ ಸ್ವಾಮಿ ಆರೋಪಿಸಿದರು.

‘ಕಾಂಗ್ರೆಸ್‌ ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ ಬೆಂಬಲಿಸುತ್ತಿರುವುದರಿಂದ ಇಂತಹ ಘಟನೆಗಳು ಜರುಗುತ್ತಿವೆ. ಘಟನೆಗೆ ಅಲ್ಲಿನ ಪೊಲೀಸ್‌ ಇಲಾಖೆಯ ವೈಫಲ್ಯವೂ ಕಾರಣ’ ಎಂದು ಶುಕ್ರವಾರ ಸಂಜೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ದೇಶದಲ್ಲಿ ಜಿಹಾದಿ ಮನಃಸ್ಥಿತಿ ಹೆಚ್ಚಾಗುತ್ತಿದೆ. ಅದಕ್ಕೆ ಈ ರೀತಿಯ ಘಟನೆಗಳೇ ಸಾಕ್ಷಿ. ಹಿಂದೂಗಳ ವಿರುದ್ಧ ಒಳಸಂಚು ರೂಪಿಸಲಾಗುತ್ತಿದೆ. ಮತಬ್ಯಾಂಕ್‌ ರಾಜಕಾರಣದಿಂದ ಕಾಂಗ್ರೆಸ್‌ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಆದರೂ ಪಾಠ ಕಲಿತಿಲ್ಲ. ಹತ್ಯೆಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಬಿಜೆಪಿ ಮಂಡಲ ಅಧ್ಯಕ್ಷ ಕಸಾಟಿ ಉಮಾಪತಿ, ಜಿಲ್ಲಾ ಮಾಧ್ಯಮ ಸಂಚಾಲಕ ಸತ್ಯನಾರಾಯಣ, ತಾಲ್ಲೂಕು ಸಂಚಾಲಕಿ ಅನುರಾಧ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.