ADVERTISEMENT

ವಿಕಸಿತ ಭಾರತ ಅಮೃತಕಾಲ ಸೇವೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 16:17 IST
Last Updated 29 ಜೂನ್ 2025, 16:17 IST
ಹೊಸಪೇಟೆ  ತಾಲ್ಲೂಕಿನ ಬೈಲವದ್ದಿಗೇರಿಯಲ್ಲಿ ಭಾನುವಾರ ಗಿಡ ನೆಡುವ ಮೂಲಕ ವಿಕಸಿತ ಭಾರತ ಅಮೃತಕಾಲ ಸೇವೆ ಆರಂಭಿಸಲಾಯಿತು
ಹೊಸಪೇಟೆ  ತಾಲ್ಲೂಕಿನ ಬೈಲವದ್ದಿಗೇರಿಯಲ್ಲಿ ಭಾನುವಾರ ಗಿಡ ನೆಡುವ ಮೂಲಕ ವಿಕಸಿತ ಭಾರತ ಅಮೃತಕಾಲ ಸೇವೆ ಆರಂಭಿಸಲಾಯಿತು   

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಬೈಲವದ್ದಿಗೇರಿಯ ಸುಡಗಾಡಪ್ಪ ತಾತನವರ ದೇವಸ್ಥಾನದಲ್ಲಿ ಭಾನುವಾರ ತಾತನವರಿಗೆ ಪೂಜೆ ಸಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ಅಮೃತಕಾಲ ಸೇವೆ ಕಾರ್ಯಕ್ರಮ ಆರಂಭಿಸಲಾಯಿತು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ಸಂಜೀವ ರೆಡ್ಡಿ ಅವರು ಸಸಿ ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಪ್ರಧಾನಿ ಮೋದಿ ಅವರ  ಮನ್ ಕಿ ಬಾತ್ ಕಾರ್ಯಕ್ರಮವನ್ನು ಪಾಪಿನಾಯಕನಹಳ್ಳಿ, ಗಾದಿಗನೂರು, ಬೈಲವದ್ದಿಗೇರಿ ಗ್ರಾಮಸ್ಥರೊಂದಿಗೆ ವೀಕ್ಷಿಸಲಾಯಿತು. ಕೇಂದ್ರ ಸರ್ಕಾರದ 11 ವರ್ಷಗಳ ಸಾಧನೆಯ ಕುರಿತು ಸಾರ್ವಜನಿಕರಿಗೆ ತಿಳಿಸಲಾಯಿತು.

ಪಕ್ಷದ ಮಂಡಲ ಅಧ್ಯಕ್ಷ ಶಂಕರ್ ಮೇಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್.ರಾಘವೇಂದ್ರ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕಿಚಡಿ ಕೊಟ್ರೇಶ್, ಪಿ.ಕೆ.ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಕಲಮ್ಮ, ಬೈಲವದ್ದಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜೆ.ಲಕ್ಷ್ಮೀದೇವಿ ಇತರರು  ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.