ADVERTISEMENT

₹28 ಲಕ್ಷದಲ್ಲಿ ವೈಕುಂಠ ರಥ, ಜೆಸಿಬಿ

ಮೃತರ ಅಂತಿಮ ಯಾತ್ರೆ ಗೌರವಯುತವಾಗಿ ನಡೆಯಲು ನಗರಸಭೆ ಕ್ರಮ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 15:52 IST
Last Updated 3 ಜುಲೈ 2025, 15:52 IST
ಹೊಸಪೇಟೆಯಲ್ಲಿ ಗುರುವಾರ ನೂತನ ಮುಕ್ತಿ ವಾಹನ, ಇತರ ಸೌಲಭ್ಯಗಳಿಗೆ ನಗರಸಭೆ ಅಧ್ಯಕ್ಷ ಎನ್‌.ರೂಪೇಶ್ ಕುಮಾರ್ ಚಾಲನೆ ನೀಡಿದರು
ಹೊಸಪೇಟೆಯಲ್ಲಿ ಗುರುವಾರ ನೂತನ ಮುಕ್ತಿ ವಾಹನ, ಇತರ ಸೌಲಭ್ಯಗಳಿಗೆ ನಗರಸಭೆ ಅಧ್ಯಕ್ಷ ಎನ್‌.ರೂಪೇಶ್ ಕುಮಾರ್ ಚಾಲನೆ ನೀಡಿದರು   

ಹೊಸಪೇಟೆ (ವಿಜಯನಗರ): ‘ಬಡಜನರು ಮೃತಪಟ್ಟಾಗಲೂ ಗೌರವಯುತ ಅಂತ್ಯಸಂಸ್ಕಾರ ಸಿಗಬೇಕು, ಅವರ ಕ್ರಿಯಾ ವಿಧಾನಗಳು ಸಾಂಗವಾಗಿ ನೆರವೇರಬೇಕು ಎಂಬ ಉದ್ದೇಶದಿಂದ ನಗರಸಭೆ ₹28 ಲಕ್ಷ ವೆಚ್ಚದಲ್ಲಿ ವೈಕುಂಠ ರಥ ವಾಹನ, ಫ್ರೀಜರ್‌ ಪೆಟ್ಟಿಗೆ ಮತ್ತು ಜೆಸಿಬಿ ಯಂತ್ರ ಖರೀದಿಸಿದೆ’ ಎಂದು ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್ ಹೇಳಿದರು.

ಗುರುವಾರ ಈ ಸೌಲಭ್ಯಗಳಿಗೆ ಚಾಲನೆ ನೀಡಿದ ಅವರು, ‘ಮೃತರ ಅಂತಿಮ ಯಾತ್ರೆ, ಕ್ರಿಯಾ ವಿಧಾನಗಳು ಅತ್ಯಂತ ಗೌರವ ಪೂರ್ವಕವಾಗಿ ನಡೆಯಬೇಕು ಎಂಬುದು ನಗರಸಭೆಯ ಉದ್ದೇಶವಾಗಿದೆ. ಅದಕ್ಕಾಗಿ ಸಾರ್ವಜನಿಕರು, ಬಡವರ ಅನುಕೂಲಕ್ಕಾಗಿ ಈ ವ್ಯವಸ್ಥೆ ಕಲ್ಪಿಸಲಾಗಿದೆ. ತಲಾ ಒಂದರ ಸೇವಾ ಶುಲ್ಕ ₹500 ನಿಗದಿಪಡಿಸಲಾಗಿದೆ’ ಎಂದರು.

‘ಹೊಸಪೇಟೆ ಜಿಲ್ಲಾ ಕೇಂದ್ರವಾದ ಮೇಲೆ ನಗರದ ವ್ಯಾಪ್ತಿ ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿದೆ. ಮೃತ ದೇಹವನ್ನು ಹೆಗಲ ಮೇಲೆ ಹೊತ್ತು ದೂರದ ಸ್ಮಶಾನಗಳಿಗೆ ತೆರಳುವುದು ಕಷ್ಟಕರವಾಗುತ್ತಿದೆ. ಕೆಲವೊಮ್ಮೆ ದೂರದ ಊರುಗಳಿಂದ ಜನರು ಬರುವವರೆಗೆ ಒಂದೆರಡು ದಿನಗಳವರೆಗೆ ಪಾರ್ಥಿವ ಶರೀರವನ್ನು ಮನೆಯಲ್ಲೇ ಇಟ್ಟುಕೊಳ್ಳಲು ಅನುಕೂಲವಾಗುವಂತೆ ಫ್ರೀಜರ್ ಒದಗಿಸಲಾಗುತ್ತದೆ, ಅಗತ್ಯ ಸಂದರ್ಭದಲ್ಲಿ ಸಾರ್ವಜನಿಕರು ನಗರಸಭೆಗೆ ಸಂಪರ್ಕಿಸಿ, ಸೇವೆ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.

ADVERTISEMENT

ಉಪಾಧ್ಯಕ್ಷ ರಮೇಶ್ ಗುಪ್ತ ಮಾತನಾಡಿ, ‘ನಗರಸಭೆಯಿಂದ ಮುಕ್ತಿ ವಾಹನ, ಫ್ರೀಜರ್ ಹಾಗೂ ಗುಂಡಿ ತೋಡಲು ಜೆಸಿಬಿ ನೀಡುವಂತೆ ಸಾರ್ವಜನಿಕರಿಂದ ಅನೇಕ ಬಾರಿ ಮನವಿಗಳು ಸಲ್ಲಿಕೆಯಾಗುತ್ತಿದ್ದವು. ಇದರಲ್ಲಿ ಲಾಭದ ಉದ್ದೇಶವಿಲ್ಲ’ ಎಂದರು.

ನಗರಸಭೆ ಎಇಇ ಮನ್ಸೂರ್, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಶಂಕ್ರಿ, ಸದಸ್ಯರಾದ ತಾರಿಹಳ್ಳಿ ಜಂಬುನಾಥ, ಎಲ್.ಎಸ್.ಆನಂದ, ಸರವಣ, ಪರಿಸರ ಎಂಜಿನಿಯರ್‌ ಆರತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.