ಹೊಸಪೇಟೆ (ವಿಜಯನಗರ): ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ವತಿಯಿಂದ ಇಲ್ಲಿನ ವಿಜಯನಗರ ಕಾಲೇಜ್‌ನಲ್ಲಿ ಸರ್ವ ಸಂಘಗಳ ಕಾರ್ಯ ಚಟುವಟಿಕೆಗಳ ಸಮಾರೋಪ ಸಮಾರಂಭ ಗುರುವಾರ ನಡೆಯಿತು.
ಸಂಘದ ಆಡಳಿತಾಧಿಕಾರಿ ಬಸವಂತರಾಯ ಕುರಿ ಮಾತನಾಡಿ, ‘ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಬದುಕಿನ ಯಶಸ್ಸಿಗೆ ದಾರಿದೀಪ. ಬದುಕಿನ ನಿಜವಾದ ಯಶಸ್ಸು ಎಂದರೆ ಸಂತೋಷವಾಗಿರುವುದು’ ಎಂದರು.
ಇಂಗ್ಲಿಷ್ ಲ್ಯಾಬ್ ಮತ್ತು ಟ್ಯಾಲಿ ಕಾರ್ಯಕ್ರಮಗಳಲ್ಲಿ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಈ ಎರಡು ಕೋರ್ಸ್‌ಗಳನ್ನು ವಿಜಯನಗರ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುತ್ತದೆ. ವಿದ್ಯಾರ್ಥಿಗಳ ಸಂವಹನ ಕೌಶಲ ಮತ್ತು ಉಚ್ಚಾರಣಾ ಕೌಶಲವನ್ನು ಸುಧಾರಿಸಲು ಭಾಷಾ ಪ್ರಯೋಗಾಲಯದಲ್ಲಿ 50 ಕಂಪ್ಯೂಟರ್‌ಗಳನ್ನು ಸ್ಥಾಪಿಸಲಾಗಿದೆ. ವಾಣಿಜ್ಯ ಪ್ರಯೋಗಾಲಯದಲ್ಲಿ 33 ಕಂಪ್ಯೂಟರ್‌ಗಳು ವಿದ್ಯಾರ್ಥಿಗಳಿಗೆ ಟ್ಯಾಲಿ ಕಾರ್ಯಕ್ರಮದಲ್ಲಿ ತರಬೇತಿ ನೀಡುತ್ತಿವೆ ಎಂದರು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಎನ್.ಮಲ್ಲಿಕಾರ್ಜುನ ಮೆಟ್ರಿ ಅಧ್ಯಕ್ಷತೆ ವಹಿಸಿದ್ದರು. ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ರವಿಕಿರಣ ಡಿ., ಪ್ರಾಚಾರ್ಯ ಪ್ರೊ.ಎಂ. ಪ್ರಭುಗೌಡ ಮಾತನಾಡಿದರು. ಕಾಲೇಜಿನ 18 ವಿದ್ಯಾರ್ಥಿಗಳು ವಾರ್ಷಿಕ ₹5.1 ಲಕ್ಷವರೆಗಿನ ವೇತನ ಪ್ಯಾಕೇಜ್‌ನೊಂದಿಗೆ ವಿವಿಧ ಕಂಪನಿಗಳಿಗೆ ಆಯ್ಕೆಯಾದ ಮಾಹಿತಿ ನೀಡಲಾಯಿತು.
ವೀ.ವಿ. ಸಂಘದ ಅಧ್ಯಕ್ಷ ಕಣೆಕಲ್ ಮಹಾಂತೇಶ್, ಕಾರ್ಯದರ್ಶಿ ಅರವಿಂದ್ ಪಟೇಲ್, ಆಡಳಿತ ಮಂಡಳಿಯ ಸದಸ್ಯ ಕಾಮರೆಡ್ಡಿ ಚಂದ್ರಶೇಖರ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.