ಅರಸೀಕೆರೆ (ವಿಜಯನಗರ): ಸಮೀಪದ ಕಬ್ಬಳ್ಳಿ ಗ್ರಾಮದ ಯುವ ರೈತ ಚೌಡಪ್ಪ (32) ಸಾಲಬಾಧೆ ತಾಳಲಾರದೆ ಶುಕ್ರವಾರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರ ತಂದೆ ಲಕ್ಷ್ಮಪ್ಪ ಹೆಸರಿನಲ್ಲಿ ಎರಡುವರೆ ಎಕರೆ ಜಮೀನಿದ್ದು, ಮಾದಿಹಳ್ಳಿ ಬ್ಯಾಂಕ್ ನಲ್ಲಿ ₹1.5 ಲಕ್ಷ ಸಾಲ ಪಡೆದಿದ್ದರು. ಕುಟುಂಬದ ನಿರ್ವಹಣೆ, ಆಟೋ ಖರೀದಿಗೆ ಕೈಗಡವಾಗಿ ₹2.5 ಲಕ್ಷ ಸಾಲ ಪಡೆದಿದ್ದರು. ಸ್ಥಳಕ್ಕೆ ಅರಸೀಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.